ಬೆಂಗಳೂರು : ರಾಜ್ಯದ ಕೋವಿಡ್-19ರ ಪಾಸಿಟಿವಿಟಿ ದರದಲ್ಲಿ ಭಾರಿ ಇಳಿಕೆ ದಾಖಲಾಗುತ್ತಿದೆ. ಸತತ ಎರಡು ದಿನಗಳಿಂದ ಶೇ.5ರೊಳಗೆ ರಾಜ್ಯದ ಪಾಸಿಟಿವಿಟಿ ದರ ಬಂದಿದ್ದು ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ನಿಯಂತ್ರಣಕ್ಕೆ ಬರುತ್ತಿರುವುದು ಖಚಿತವಾಗಿದೆ.ಒಮಿಕ್ರೋನ್ ಪ್ರೇರಿತ ಮೂರನೇ ಅಲೆಯಲ್ಲಿ ಜನವರಿ 8 ರಂದು ಮೊದಲ ಬಾರಿಗೆ ಪಾಸಿಟಿವಿಟಿ ದರ ಶೇ.5 ದಾಟಿತ್ತು. ಅಲ್ಲಿಂದ ಬಳಿಕ ಏರುತ್ತ ಸಾಗಿದ್ದ ಪಾಸಿಟಿವಿಟಿ ದರ ಜನವರಿ 24ಕ್ಕೆ ಮೂರನೇ ಅಲೆಯ ಗರಿಷ್ಠ ಶೇ.32.95 ತಲುಪಿತ್ತು.