ಟ್ವೀಟರ್ ನಲ್ಲಿ ತಮ್ಮ ಸೋಲಿಗೆ ಕಾರಣ ತಿಳಿಸಿದ ನಟ ಜಗ್ಗೇಶ್

ಬೆಂಗಳೂರು, ಬುಧವಾರ, 16 ಮೇ 2018 (07:00 IST)

ಬೆಂಗಳೂರು : ಈ ಬಾರಿ ಚುನಾವಣೆಯಲ್ಲಿ ಯಶವಂತಪುರ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಟ ನವರಸ ನಾಯಕ ಜಗ್ಗೇಶ್ ಅವರು ಸೋಲನ್ನು ಅನುಭವಿಸಿದ್ದು, ಇದೀಗ ಟ್ವೀಟರ್ ನಲ್ಲಿ  ತಮ್ಮ ಸೋಲಿಗೆ ಕಾರಣವೆನೆಂಬುದನ್ನು ಹಂಚಿಕೊಂಡಿದ್ದಾರೆ.


 ಈ ಬಗ್ಗೆ ಟ್ವೀಟ್ ಮಾಡಿರುವ ನಟ ಜಗ್ಗೇಶ್ ಅವರು,’ಇದು ನನ್ನ ಸೋಲಲ್ಲ. ನನ್ನ ಮೇಲಿನ ಅಭಿಮಾನ ಗೆದ್ದಿದೆ. ಮೂರು ತಿಂಗಳ ಮುಂಚೆಯೇ ನನಗೆ ಅವಕಾಶ ನೀಡಿದ್ದರೇ ಅದರ ಚಿತ್ರಣವೇ ಬೇರೆ ಆಗುತ್ತಿತ್ತು. ಕೇವಲ 10 ದಿನದ ಶ್ರಮಕ್ಕೆ ಹಾಗೂ ಹಣಹೆಂಡ ಹಂಚದೆ. ಕಲಾವಿದನೆಂಬ ಅಭಿಮಾನದಿಂದ 52,946 ಮತ ನೀಡಿದ ಯಶವಂತಪುರದ ಮಹನೀಯರಿಗೆ ಧನ್ಯವಾದ’ ಎಂದು ತಿಳಿಸಿದ್ದಾರೆ.


ಕಾಂಗ್ರೆಸ್ ಪಕ್ಷದ ಎಸ್.ಟಿ ಸೋಮಶೇಖರ್ ಸುಮಾರು 1 ಲಕ್ಷ ಮತಗಳನ್ನ ಪಡೆದು ಜಯಶಾಲಿಯಾಗಿದ್ದರೇ, ಜೆಡಿಎಸ್ ಪಕ್ಷದ ಜವರಾಯಿ ಗೌಡ 95 ಸಾವಿರ ಮಗಳನ್ನ ಪಡೆದು ಎರಡನೇ ಸ್ಥಾನ ಹಾಗೂ ಜಗ್ಗೇಶ್ ಅವರು 45 ಸಾವಿರ ಮತಗಳನ್ನು  ಪಡೆದು ಮೂರನೆ ಸ್ಥಾನಕ್ಕಿಳಿದು ಪರಜಯಗೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಟೀಕಿಸಿದವರಿಗೆ ನಟ ಪ್ರಕಾಶ್ ರೈ ನೀಡಿದ ಉತ್ತರವೇನು ಗೊತ್ತಾ…?

ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ...

news

ರಾಜ್ಯ ರಾಜಕೀಯದಲ್ಲಿ ರೆಸಾರ್ಟ್ ರಾಜಕಾರಣ

ಬೆಂಗಳೂರು: ರಾಜ್ಯದ ಚುನಾವಣೆ ಕ್ಷಣಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಜೆ.ಡಿಎಸ್, ಕಾಂಗ್ರೆಸ್ ...

news

ರಾಜ್ಯಪಾಲರ ಭೇಟಿಗೆ ಹೊರಟ ಕುಮಾರಸ್ವಾಮಿ, ಸಿದ್ದರಾಮಯ್ಯ

ಬೆಂಗಳೂರು: ಸಮ್ಮಿಶ್ರ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ...

news

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಯಾರು ಯಾರು ಗೆದ್ದಿದ್ದಾರೆ ಇಲ್ಲಿದೆ ಪಟ್ಟಿ

ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಯಾರ್ಯಾರಿಗೆ ಜಯಮಾಲೆ ಹಾಕಿದ್ದಾರೆ ಎನ್ನುವ ಪಟ್ಟಿ ಇಲ್ಲಿದೆ. ...

Widgets Magazine
Widgets Magazine