ಜೆಡಿಎಸ್ ನಲ್ಲೂ ಬಂಡಾಯದ ಬಿಸಿ! ಸಿಎಂ ಕೈಗೂ ಸಿಗುತ್ತಿಲ್ಲ ನೂತನ ಸಚಿವರು!

ಬೆಂಗಳೂರು, ಶನಿವಾರ, 9 ಜೂನ್ 2018 (08:54 IST)


ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬಳಿಕ ಉಂಟಾಗಿರುವ ಬಿಕ್ಕಟ್ಟು ಜೆಡಿಎಸ್ ಪಕ್ಷಕ್ಕೂ ತಗಲಿದೆ. ಸಚಿವ ಸ್ಥಾನ ಸಿಗದ ಅಸಮಾಧಾನಿತರು ಒಂದೆಡೆಯಾದರೆ ಪ್ರಮುಖ ಖಾತೆಗಾಗಿ ಪಟ್ಟು ಹಿಡಿದು ನೂತನ ಸಚಿವರು ಸಿಎಂ ಕೈಗೂ ಸಿಗದೇ ಓಡಾಡುತ್ತಿದ್ದಾರೆ.
 
ಇಂಧನ, ಹಣಕಾಸು, ಕಂದಾಯ ಇಲಾಖೆಯಂತಹ ಪ್ರಮುಖ ಖಾತೆಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿರುವ ಜೆಡಿಎಸ್ ಈ ಪ್ರಮುಖ ಖಾತೆಗಳನ್ನು ದೇವೇಗೌಡರ ಕುಟುಂಬದವರಿಗೇ ನೀಡಿದ್ದಾರೆ ಎನ್ನುವುದು ನೂತನವಾಗಿ ಸಚಿವರಾಗಿ ಬಡ್ತಿ ಹೊಂದಿದ ಸಿಎಸ್ ಪುಟ್ಟರಾಜು, ಜಿಟಿ ದೇವೇಗೌಡ ಮುಂತಾದವರ ಆರೋಪ.
 
ಈ ಹಿನ್ನಲೆಯಲ್ಲಿ ಸ್ವತಃ ಸಿಎಂ ಕುಮಾರಸ್ವಾಮಿ ಕರೆ ಮಾಡಿದರೂ ಮೊಬೈಲ್ ಕರೆ ಸ್ವೀಕರಿಸುತ್ತಿಲ್ಲ. ಇಬ್ಬರೂ ಶಾಸಕರು ಮೈಸೂರಿಗೆ ತೆರಳಿದ್ದಾರೆ ಎಂದು ಖಾಸಗಿ ವಾಹಿನಿಗಳು ವರದಿ ಮಾಡಿವೆ. ಇಂಧನ ಮತ್ತು ಹಣಕಾಸು ಖಾತೆ ಸಿಎಂ ಕುಮಾರಸ್ವಾಮಿಯೇ ಉಳಿಸಿಕೊಂಡಿದ್ದಾರೆ. ಇನ್ನು, ಲೋಕೋಪಯೋಗಿ ಖಾತೆಯನ್ನು ಎಚ್ ಡಿ ರೇವಣ್ಣ ಪಡೆದಿದ್ದಾರೆ. ಕೇವಲ ಶಿಕ್ಷಣ ಇತ್ಯಾದಿ ಅಷ್ಟೇನೂ ಪ್ರಮುಖವಲ್ಲದ ಖಾತೆಗಳನ್ನು ತಮಗೆ ನೀಡಿದ್ದಾರೆ ಎಂದು ಈ ಸಚಿವರು ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  
ಜೆಡಿಎಸ್ ಸಿಎಂ ಕುಮಾರಸ್ವಾಮಿ ರಾಜ್ಯ ಸುದ್ದಿಗಳು Jds Cm Kumaraswamy State News

Widgets Magazine

ಸುದ್ದಿಗಳು

news

ಕಾಂಗ್ರೆಸ್ ಖಾತೆ ಜಗಳಕ್ಕೆ ಸಿದ್ದರಾಮಯ್ಯ ಕುಮ್ಮಕ್ಕು ಕಾರಣವೇ?!

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಕಾಂಗ್ರೆಸ್ ನಲ್ಲಿ ಸಚಿವ ಸ್ಥಾನ ...

news

ಬಂಡಾಯದ ಎಚ್ಚರಿಕೆ ನೀಡಿದ ಮಾಜಿ ಸಚಿವ ಎಂಬಿ ಪಾಟೀಲ್

ಬೆಂಗಳೂರು: ಕಾಂಗ್ರೆಸ್ ನಲ್ಲಿ ಸಚಿವ ಸಂಪುಟ ವಿಸ್ತರಣೆಯಿಂದ ಶುರುವಾದ ಅಸಮಾಧಾನ ತಾರಕಕ್ಕೇರಿದ್ದು, ಡಿಸಿಎಂ ...

news

ಮುಷರಫ್ ಗುರುತಿನ ಚೀಟಿ ಮತ್ತು ಪಾಸ್‌ಪೋರ್ಟ್‌ ಸೀಜ್

ಪಾಕಿಸ್ತಾನ : ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ಅವರ ರಾಷ್ಟ್ರೀಯ ಗುರುತಿನ ಚೀಟಿ ಮತ್ತು ...

news

ಸಂಪುಟ ರಚನೆ ವಿಚಾರದಲ್ಲಿ ಭಿನ್ನಮತ ಇರೋದು ನಿಜ: ಸಿದ್ದರಾಮಯ್ಯ

ಬಾಗಲಕೋಟೆ: ಸಂಪುಟ ಪುನರ್ ರಚನೆ ವಿಚಾರದಲ್ಲಿ ನಮ್ಮಲ್ಲಿ ಭಿನ್ನಮತ ಇರೋದು ನಿಜ. ಆದ್ರೆ ಅದನ್ನು ...

Widgets Magazine