ಪ್ರಧಾನಿ ಮೋದಿ ಬಗ್ಗೆ ಮೈಸೂರು ಮಹಾರಾಜ ಯದುವೀರ್ ಹೇಳಿದ್ದೇನು?

ಮೈಸೂರು, ಭಾನುವಾರ, 8 ಜುಲೈ 2018 (08:16 IST)

ಮೈಸೂರು: ಪ್ರಧಾನಿ ಮೋದಿ ಪರವಾಗಿ ಮೈಸೂರು ಮಹಾರಾಜ ಯದುವೀರ್ ಒಡೆಯರ್ ಮಾತನಾಡಿದ್ದು, ಮತ್ತೆ ಅವರ ರಾಜಕೀಯ ಸೇರ್ಪಡೆ ಬಗ್ಗೆ ಗುಸು ಗುಸು ಶುರುವಾಗಿದೆ.
 

ಮಾಧ್ಯಮಗಳೊಂದಿಗೆ ಮಾತನಾಡಿರುವ ಯದುವೀರ್ ಪ್ರಧಾನಿ ಮೋದಿ ಮತ್ತೊಮ್ಮೆ ಗೆದ್ದು ಬರಬೇಕು ಎಂಬರ್ಥದಲ್ಲಿ ಮಾತನಾಡಿದ್ದಾರೆ. ಅಭಿವೃದ್ಧಿ ಮಾಡಲು ಐದು ವರ್ಷ ಸಾಲದು. ಮತ್ತಷ್ಟು ಅಭಿವೃದ್ಧಿ ಮಾಡಲು ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎಂದು ಯದುವೀರ್ ಒಡೆಯರ್ ಅಭಿಪ್ರಾಯಪಟ್ಟಿದ್ದಾರೆ.
 
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪ್ರಚಾರಕ್ಕೆಂದು ಮೈಸೂರಿಗೆ ಬಂದಿದ್ದ ಪ್ರಧಾನಿ ಮೋದಿ ಅರಮನೆಗೆ ಭೇಟಿ ನೀಡಿದ್ದಲ್ಲದೆ, ರಾಜವಂಶಸ್ಥರೊಂದಿಗೆ ಮಾತುಕತೆ ನಡೆಸಿದ್ದರು. ಇದೀಗ ಲೋಕಸಭೆ ಚುನಾವಣೆಗೆ ಮೊದಲು ಯದುವೀರ್ ಮೋದಿ ಪರ ಬ್ಯಾಟಿಂಗ್ ಮಾಡಿರುವುದು ಅವರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂಬ ಸುದ್ದಿಗೆ ಪುಷ್ಟಿ ಸಿಕ್ಕಂತಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್

ಉಚಿತ ಬಸ್ ಪಾಸ್ ಗಾಗಿ ಆಗ್ರಹಿಸಿ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೋಲಿಸರು ಲಾಠಿ ಪ್ರಹಾರ ...

news

ಮಾಜಿ ಸಚಿವ ಪ್ರಮೋದ ಮಧ್ವರಾಜ್ ಗೆ ಟಾಂಗ್ ನೀಡಿದ ಶಾಸಕ

ಕರಾವಳಿಯ ಬೇಡಿಕೆಗಳನ್ನು ಉಡುಪಿ ಜಿಲ್ಲೆಯ ಶಾಸಕರು ಸಿ ಎಂಕುಮಾರಸ್ವಾಮೀಗೆ ತಡವಾಗಿ ನೀಡಿದ್ದಾರೆ ಎಂಬ ಮಾಜಿ ...

news

ಪ್ರಧಾನಿ ವಿರುದ್ಧ ಸಂಸದ ವೀರಪ್ಪ ಮೊಯಿಲಿ ಕಿಡಿ

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆ ವೇಳೆಯೇ ಮುಂದಿನ ಲೋಸಕಭಾ ಚುನಾವಣೆಯಲ್ಲಿ ಮೈತ್ರಿ ...

news

ಸಿಗರೇಟ್ ಚಟಗಾರ ಮಾಡಿದ ಕೆಲಸವೇನು ಗೊತ್ತಾ?

ಅಂಗಡಿಗಳ ಶೆಟ್ರಸ್ ಮುರಿದು ಕೇವಲ ಸಿಗರೇಟ್ ಪ್ಯಾಕ್ ಗಳನ್ನ ಮಾತ್ರ ಕದ್ದಿರುವ ವಿಚಿತ್ರ ಘಟನೆ.

Widgets Magazine
Widgets Magazine