Widgets Magazine
Widgets Magazine

ಕೆಎಸ್ ಈಶ್ವರಪ್ಪ ಮೇಲೆ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವೇಡ್ಕರ್ ಗೆ ಕೆಂಡದಂಥಾ ಕೋಪ ಬಂದಿದ್ದೇಕೆ?!

ಬೆಂಗಳೂರು, ಗುರುವಾರ, 17 ಮೇ 2018 (08:37 IST)

ಬೆಂಗಳೂರು: ಹಾಗೂ ಹೀಗೂ ಕಷ್ಟಪಟ್ಟು ಕೆಪಿಜೆಪಿ ಪಕ್ಷದ ಶಾಸಕ ಶಂಕರ್ ಬೆಂಬಲ ಗಳಿಸಿದ್ದನ್ನು ಅಷ್ಟೇ ವೇಗವಾಗಿ ಕೈ ತಪ್ಪಲು ಕಾರಣರಾದ ಮೇಲೆ ಬಿಜೆಪಿ ರಾಜ್ಯ ಉಸ್ತುವಾರಿ ಪ್ರಕಾಶ್ ಜಾವೇಡ್ಕರ್ ಸಿಟ್ಟಿಗೆದ್ದಿದ್ದಾರೆ.
 
ನಿನ್ನೆ ಬೆಳಿಗ್ಗೆಯವರೆಗೂ ಶಂಕರ್ ಬಿಜೆಪಿ ಪರ ಇದ್ದರು. ಆದರೆ ಸಂಜೆ ಕಾಂಗ್ರೆಸ್ ಕಡೆಗೆ ವಾಲಿದ್ದರು. ಸದ್ಯಕ್ಕೆ ಬಿಜೆಪಿಗೆ ಒಬ್ಬೊಬ್ಬ ಶಾಸಕರ ಬೆಂಬಲವೂ ಮುಖ್ಯ. ಹಾಗಿರುವಾಗ ಅನಾಯಾಸವಾಗಿ ಸಿಕ್ಕ ಶಾಸಕನನ್ನು ಉಳಿಸಿಕೊಳ್ಳದ ಈಶ್ವರಪ್ಪ ಮೇಲೆ ಜಾವೇಡ್ಕರ್ ಸಿಟ್ಟಿಗೆದ್ದಿದ್ದಾರೆ.
 
‘ಒಬ್ಬ ಹಿರಿಯ ನಾಯಕನಾಗಿ ನಿಮಗೆ ಶಾಸಕನನ್ನು ಉಳಿಸಿಕೊಳ್ಳಲಾಗಲಿಲ್ಲವೇ? ನಿಮ್ಮ ಮಗ ಕಾಂತೇಶ್ ನನ್ನು ಕಳುಹಿಸಿ ಏಕೆ ಒಪ್ಪಿಸಿದಿರಿ? ನಿಮ್ಮ ಜತೆಗೇ ಇದ್ದ ಶಾಸಕ ಕಾಂಗ್ರೆಸ್ ಜತೆ ಸಂಪರ್ಕ ಬೆಳೆಸಿದ್ದು ಹೇಗೆ? ಇದನ್ನೆಲ್ಲಾ ಅಮಿತ್ ಶಾ ಗಮನಕ್ಕೆ ತರುತ್ತೇನೆ. ನೀವೇ ಉತ್ತರ ಕೊಡಿ’ ಎಂದು ಈಶ್ವರಪ್ಪಗೆ ಜಾವೇಡ್ಕರ್ ತಾಕೀತು ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  
ಕೆಎಸ್ ಈಶ್ವರಪ್ಪ ಪ್ರಕಾಶ್ ಜಾವೇಡ್ಕರ್ ಬಿಜೆಪಿ ಕರ್ನಾಟಕ ರಾಜಕೀಯ ರಾಜ್ಯ ಸುದ್ದಿಗಳು Bjp Prakash Javedkar Ks Eeshwarappa Karnataka Politics State News

Widgets Magazine

ಸುದ್ದಿಗಳು

news

ಶಾಸಕರಿಗೆ ಆಮಿಷ ಒಡ್ಡಲು ಬಿಜೆಪಿಗೆ ಹಣ ನೀಡಿದ ಗುಜರಾತ್ ಉದ್ಯಮಿ ಯಾರು? ರಮ್ಯಾ ಪ್ರಶ್ನೆ

ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ರಚಿಸಲು ಸರ್ಕಸ್ ಮಾಡುತ್ತಿರುವ ಬಿಜೆಪಿ ಕಾಂಗ್ರೆಸ್-ಬಿಜೆಪಿ ಶಾಸಕರನ್ನು ...

news

ಪತ್ರಕರ್ತರ ಮೇಲೆಯೇ ಸಿಟ್ಟಿಗೆದ್ದ ಕುಮಾರಸ್ವಾಮಿ

ಬೆಂಗಳೂರು: ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡಿದ ಸುದ್ದಿ ಕೇಳಿ ಜೆಡಿಎಸ್ ...

news

ರಾತ್ರೋ ರಾತ್ರಿ ನಡೆಯಿತು ತಯಾರಿ! ಬಿಎಸ್ ವೈ ಮನೆಗೆ ಮುಖ್ಯ ಕಾರ್ಯದರ್ಶಿ ಭೇಟಿ

ಬೆಂಗಳೂರು: ರಾತ್ರೋ ರಾತ್ರಿ ಬಿಜೆಪಿ ಸರ್ಕಾರ ರಚಿಸುವ ಸುದ್ದಿ ಬಂದ ಬೆನ್ನಲ್ಲೇ ಬಿಎಸ್ ಯಡಿಯೂರಪ್ಪ ಮನೆಗೆ ...

news

ಗುಜರಾತಿ ವ್ಯಾಪಾರ ಮಾಡ್ತೀವಿ ಅಂದುಕೊಂಡಿದ್ದೀರಾ? ನಮ್ಮನ್ನು ಏನಂದ್ಕೊಂಡಿದ್ದೀರಾ? ಕುಮಾರಸ್ವಾಮಿ ಕೆಂಡಾಮಂಡಲ

ಬೆಂಗಳೂರು: ಇನ್ನೇನು ಮುಖ್ಯಮಂತ್ರಿಯಾಗುತ್ತಿದ್ದೇನೆಂಬ ಖುಷಿಯಲ್ಲಿದ್ದ ಎಚ್ ಡಿ ಕುಮಾರಸ್ವಾಮಿ, ಬಿಎಸ್ ...

Widgets Magazine Widgets Magazine Widgets Magazine