ನವದೆಹಲಿ (ಜು.31): ಕೊರೋನಾ 3ನೇ ಅಲೆಯ ಆತಂಕದಲ್ಲಿರುವ ದೇಶದಲ್ಲಿ ಶುಕ್ರವಾರ ಕೋವಿಡ್ ಸೋಂಕಿತರ ಸಂಖ್ಯೆ ಭಾರಿ ಏರಿಕೆಯಾಗಿದ್ದು, 44,230 ಹೊಸ ಪ್ರಕರಣಗಳು ಪತ್ತೆಯಾಗಿವೆ. ಅದರೊಂದಿಗೆ, ಸತತ 3ನೇ ದಿನವೂ ದೇಶದಲ್ಲಿ 40,000ಕ್ಕೂ ಅಧಿಕ ಪ್ರಕರಣ ಪತ್ತೆಯಾದಂತಾಗಿದೆ. ಶುಕ್ರವಾರ ಒಟ್ಟು 555 ಜನರು ಸಾವನ್ನಪ್ಪಿದ್ದಾರೆ.