ಸಚಿವ ನಿತಿನ್ ಗಡ್ಕರಿಯಿಂದಲೇ ಪ್ರಧಾನಿ ಮೋದಿ ಹತ್ಯೆ! ವೈರಲ್ ಆಯ್ತು ಟ್ವೀಟ್

ನವದೆಹಲಿ, ಸೋಮವಾರ, 11 ಜೂನ್ 2018 (08:59 IST)

ನವದೆಹಲಿ: ದೆಹಲಿಯ ಜೆಎನ್ ಯು ವಿದ್ಯಾರ್ಥಿನಿ ಶೆಹ್ಲಾ ರಶೀದ್ ಎಂಬಾಕೆಯ ಟ್ವೀಟ್ ಇದೀಗ ಕೇಂದ್ರ ಸಚಿವ ನಿತಿನ್ ಗಡ್ಕರಿ ಕೆಂಗಣ್ಣಿಗೆ ಗುರಿಯಾಗಿದೆ.
 
ಜೆಎನ್ ಯು ವಿದ್ಯಾರ್ಥಿನಿ ‘ಮೋದಿ ಅವರನ್ನು ಹತ್ಯೆ ಮಾಡಲು ಆರ್ ಎಸ್ಎಸ್/ನಿತನ್ ಗಡ್ಕರಿ ಅವರೇ ಸಂಚು ರೂಪಿಸಿದಂತಿದೆ. ನಂತರ ಯಾರೋ ಮುಸ್ಲಿಮರು ಅಥವಾ ಕಮ್ಯುನಿಷ್ಟರ ತಲೆಗೆ ಆರೋಪ ಕಟ್ಟಿ, ಕೊನೆಗೆ ಮುಸ್ಲಿಮರ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿಸುವ ಸಂಚು ಇರಬಹುದು’ ಎಂದು ವಿವಾದಾತ್ಮಕ ಟ್ವೀಟ್ ಮಾಡಿದ್ದಳು.
 
ಆಕೆಯ ಟ್ವೀಟ್ ನೋಡಿ ಸಿಟ್ಟಿಗೆದ್ದಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಆಕೆಯ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ನನ್ನ ವಿರುದ್ಧ ಅತ್ಯಂತ ಕೆಟ್ಟದಾಗಿ ಹೇಳಿಕೆ ನೀಡಿರುವ ಸಮಾಜದ್ರೋಹಿ ಶಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಗಡ್ಕರಿ ಟ್ವೀಟ್ ಮಾಡಿದ್ದಾರೆ. ಇಷ್ಟಕ್ಕೇ ಸುಮ್ಮನಾಗದ ಶೆಹ್ಲಾ, ಗಡ್ಕರಿ ಟ್ವೀಟ್ ಗೆ ಪ್ರತಿಯಾಗಿ ‘ವಿಶ್ವದ ಅತಿ ದೊಡ್ಡ ಪಕ್ಷದ ನಾಯಕರೊಬ್ಬರು ಒಂದು ವ್ಯಂಗ್ಯ ಟ್ವೀಟ್ ನ್ನು ಗಂಭೀರವಾಗಿ ಪರಿಗಣಿಸಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾಳೆ. ಇದೀಗ ಗಂಭೀರ ಸ್ವರೂಪಕ್ಕೆ ತಿರುಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಜೆಪಿ ನಾಯಕರನ್ನು ಲೇವಡಿ ಮಾಡಿದ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ

ಜೋಧ್ಪುರ : ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಭಾರತವು ಅಭಿವೃದ್ಧಿ ಹೊಂದಿದೆಯೆಂದು ಬಿಜೆಪಿ ...

news

ಶೃಂಗಸಭೆ ಯಶಸ್ವಿಯಾದರೆ ಕಿಮ್‌ರನ್ನು ಶ್ವೇತಭವನಕ್ಕೆ ಆಹ್ವಾನಿಸಲಿರುವ ಅಮೇರಿಕಾ

ವಾಷಿಂಗ್ಟನ್ : ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ಅವರನ್ನು 'ನಿರಂಕುಶಾಧಿಕಾರಿ' ಹಾಗೂ 'ಕ್ರೂರ ...

news

ಕೇಂದ್ರ ಸಚಿವ ನಿತಿನ್ ಗಡ್ಕರಿ ನಟ ಸಲ್ಮಾನ್ ಖಾನ್ ಅನ್ನು ಭೇಟಿ ಮಾಡಿದ್ಯಾಕೆ?

ಮುಂಬೈ : ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮನೆಗೆ ...

news

ಅನಧಿಕೃತ ಮಾಹಿತಿ ಆಧರಿಸಿ ಹೇಳಿಕೆ ನೀಡಿದ್ದಕ್ಕೆ ಮೋದಿ ಕ್ಷಮೆಯಾಚಿಸಬೇಕು - ಕಾಂಗ್ರೆಸ್ ಒತ್ತಾಯ

ನವದೆಹಲಿ : ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಮತ್ತು ಕಾಂಗ್ರೆಸ್‌ನ ನಾಯಕರ ಮೇಲೆ ಸುಳ್ಳು ಆರೋಪ ಮಾಡಿದ್ದ ...

Widgets Magazine