ವಂಚನೆ ಪ್ರಕರಣ: ಸೂಪರ್ ಸ್ಟಾರ್ ರಜನೀಕಾಂತ್ ಪತ್ನಿ ಲತಾ ವಿಚಾರಣೆ ಇಂದು

ಚೆನ್ನೈ, ಬುಧವಾರ, 11 ಜುಲೈ 2018 (09:08 IST)

ಚೆನ್ನೈ: ಹಣ ಪಾವತಿ ವಿಚಾರದಲ್ಲಿ ವಂಚನೆ ಮಾಡಿದ ಪ್ರಕರಣದಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ಪತ್ನಿ ರಜನೀಕಾಂತ್ ಇಂದು ವಿಚಾರಣೆಗೊಳಪಡಲಿದ್ದಾರೆ.
 

ಲತಾ ರಜನೀಕಾಂತ್ ಪ್ರಕರಣ ಇಂದು ವಿಚಾರಗೊಳಪಡಲಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಜಾಹೀರಾತು ಸಂಸ್ಥೆಯೊಂದಕ್ಕೆ ಸುಮಾರು 6 ಕೋಟಿಗೂ ಅಧಿಕ ಹಣ ಪಾವತಿ ಮಾಡದೇ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಲತಾ ರಜನೀಕಾಂತ್ ವಿಚಾರಣೆ ಎದುರಿಸಲಿದ್ದಾರೆ.
 
ಈ ಪ್ರಕರಣವನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ತಳ್ಳಿ ಹಾಕಿದ ಸುಪ್ರೀಂಕೋರ್ಟ್ ಹೊಸ ಆದೇಶ ನೀಡಿದೆ. ರಜನಿ-ದೀಪಿಕಾ ಪಡುಕೋಣೆ ಅಭಿನಯದ ಕೊಚಾಡಿಯನ್ ಸಿನಿಮಾದ ಜಾಹೀರಾತಿಗಾಗಿ ಬೆಂಗಳೂರು ಮೂಲದ ಜಾಹೀರಾತು ಸಂಸ್ಥೆಗೆ ಹಣ ಪಾವತಿ ಮಾಡದೇ ಲತಾ ಮೋಸ ಮಾಡಿದ್ದರು ಎನ್ನಲಾಗಿದೆ. ಆದರೆ ಕರ್ನಾಟಕ ಹೈಕೋರ್ಟ್ ಇದು ವಂಚನೆ ಪ್ರಕರಣವಲ್ಲ, ಒಪ್ಪಂದ ಮುರಿಯಲಾಗಿದೆಯಷ್ಟೇ ಎಂದು ವಂಚನೆ ಪ್ರಕರಣವನ್ನು ಕೈ ಬಿಟ್ಟಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಧಾನಿ ಮೋದಿಗೆ ಅಳಿಯ ಸಿಕ್ಕಾಯ್ತು, ರಾಹುಲ್ ಗಾಂಧಿ ಮದುವೆಯಾದ್ರಂತೆ! ನಟಿ ರಮ್ಯಾ ವಿವಾದಿತ ಟ್ವೀಟ್ ಮಾಡಿದೆ ಸೆನ್ಸೇಷನ್!

ನವದೆಹಲಿ: ಕಳೆದ ಕೆಲವು ದಿನಗಳಿಂದ ಸೈಲೆಂಟ್ ಆಗಿದ್ದ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಅಧ್ಯಕ್ಷೆ ರಮ್ಯಾ ಮತ್ತೆ ...

news

ಟ್ರಂಪ್ ವಿರುದ್ಧ ಮಾಜಿ ಕಾರು ಚಾಲಕ ದೂರು ದಾಖಲಿಸಿದ್ಯಾಕೆ?

ನ್ಯೂಯಾರ್ಕ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಉದ್ಯಮ ಗುಂಪಿನ ವಿರುದ್ಧ ಅವರ ಮಾಜಿ ಕಾರು ...

news

ರೊಟ್ಟಿ ಸುಟ್ಟಿದ್ದು ಕಪ್ಪಾಗಿದ್ದಕ್ಕೆ ಪತ್ನಿಗೆ ತಲಾಖ್ ನೀಡಿದ ಭೂಪ!

ಉತ್ತರ ಪ್ರದೇಶ : ಕೇಂದ್ರದಲ್ಲಿ ಎನ್ ಡಿೆ ಸರಕಾರ ಅಧಿಕಾರಕ್ಕೆ ಬಂದ ನಂತರ ಮುಸ್ಲಿಂ ಮಹಿಳೆಯರ ಹಿತ ಕಾಪಾಡಲು ...

news

ಪರೇಶ ಮೇಸ್ತ್ ಪ್ರಕರಣ: ಶೀಘ್ರ ತನಿಖೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

ಹೊನ್ನಾವರ ಪಟ್ಟಣದ ಯುವಕ ಪರೇಶ್ ಮೇಸ್ತನ ಅನುಮಾನಾಸ್ಪದ ಸಾವಿನ ಪ್ರಕರಣದ ಶೀಘ್ರ ತನಿಖೆಗೆ ಒತ್ತಾಯಿಸಿ ...

Widgets Magazine