ನವದೆಹಲಿ : ಕಳೆದ ವರ್ಷ ಭಾರತದ ಕೆಮ್ಮಿನ ಸಿರಪ್ ಸೇವಿಸಿದ ಬಳಿಕ ಗ್ಯಾಂಬಿಯಾ ಹಾಗೂ ಉಜ್ಬೇಕಿಸ್ತಾನದಲ್ಲಿ ಹಲವು ಮಕ್ಕಳ ಸಾವಾಗಿತ್ತು. ಈ ಘಟನೆಯ ಬಳಿಕ ಇದೀಗ ಭಾರತ ಸರ್ಕಾರ ಕೆಮ್ಮಿನ ಸಿರಪ್ಗಳನ್ನು ವಿದೇಶಕ್ಕೆ ರಫ್ತು ಮಾಡುವ ಮೊದಲು ಅದನ್ನು ಪರೀಕ್ಷೆಗೆ ಒಳಪಡಿಸುವುದು ಕಡ್ಡಾಯಗೊಳಿಸಿದೆ.