ದೇವಸ್ಥಾನದ ಪೂಜಾರಿಯಿಂದಲೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ

ಚಿತ್ರದುರ್ಗ, ಭಾನುವಾರ, 1 ಏಪ್ರಿಲ್ 2018 (14:34 IST)

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಕಡೂರು ಗ್ರಾಮದಲ್ಲಿರುವ ದೇವಾಲಯದ ಪೂಜಾರಿಯೇ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಹೀನ ಘಟನೆ ವರದಿಯಾಗಿದೆ.
60 ವರ್ಷ ವಯಸ್ಸಿನ ಜಯಪ್ಪ ಎನ್ನುವ ಪೂಜಾರಿಯೇ 12 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿ ದನದ ಕೊಟ್ಟಿಗೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. 
 
ಆರೋಪಿ ಪೂಜಾರಿ ಜಯಪ್ಪನ ವರ್ತನೆಯಿಂದ ಆಘಾತಗೊಂಡ ಬಾಲಕಿ ಜೋರಾಗಿ ಕೂಗಿಕೊಂಡಾಗ ಘಟನೆ ಬೆಳಕಿಗೆ ಬಂದಿದೆ. ಬಾಲಕಿಯ ಪೋಷಕರು ಮತ್ತು ಗ್ರಾಮಸ್ಥರು ಆರೋಪಿ ಪೂಜಾರಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
 
ಆರೋಪಿ ಜಯಪ್ಪ ವಿರುದ್ಧ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅನುಮತಿ ಪಡೆಯದೇ ಬೈಕ್ ರ್ಯಾಲಿ, ಪ್ರಕರಣ ದಾಖಲು

ಮಂಡ್ಯ: ಮಂಡ್ಯ ಟಿಕೆಟ್ ಆಕಾಂಕ್ಷಿ ಪ್ರಭಾ ನೇತೃತ್ವದಲ್ಲಿ ಜೆಡಿಎಸ್ ಮಹಿಳಾ ಕಾರ್ಯಕರ್ತರಿಂದ ನಡೆಯುತಿದ್ದ ...

news

ಕೈ ನಾಯಕನಿಗೆ ಬಿಜೆಪಿ ಗಾಳ: ವೇದಿಕೆ ಸಜ್ಜು

ಕೊಪ್ಪಳ: ಕೊಪ್ಪಳದ ಕಾಂಗ್ರೇಸಿನ ಪ್ರಭಾವಿ ಮುಖಂಡ ಹಾಗೂ ಕುರುಬ ಸಮುದಾಯದ ಪ್ರಭಾವಿ ನಾಯಕ ಮಾಜಿಸಚಿವ ಸಾಲೋಣಿ ...

news

ಬ್ಯಾಡಗಿ ಕ್ಷೇತ್ರದಲ್ಲಿ ಬುಗಿಲೆದ್ದ ಬಿಜೆಪಿ ಬಿನ್ನಮತ: ಬಿಎಸ್‌ವೈ ವಿರುದ್ಧ ಆಕ್ರೋಶ

ಹಾವೇರಿ : ಮಾಜಿ ಶಾಸಕ ಸುರೇಶಗೌಡ ಪಾಟೀಲ್‌ಗೆ ಟಿಕೆಟ್ ನೀಡದಿದ್ರೆ ಬ್ಯಾಡಗಿ ಬಂದ್‌ಗೆ ಕರೆ ನೀಡಲಾಗುವುದು ...

news

ಬಿಜೆಪಿಯಿಂದ ಸ್ವಾಮೀಜಿಗಳಿಗೆ ಟಿಕೆಟ್ ಅಮಿತ್ ಶಾ ರಣತಂತ್ರ

.ಬಾಗಲಕೋಟೆ: ಖ್ಯಾತ ಸ್ವಾಮಿಜಿಗಳಿಗೆ ಟಿಕೆಟ್ ನೀಡಿ ಹೆಚ್ಚು ಸ್ಥಾನ ಗೆಲ್ಲಬೇಕು ಎನ್ನುವ ಚಿಂತನೆಯಲ್ಲಿರುವ ...

Widgets Magazine
Widgets Magazine