ಅನಾರೋಗ್ಯಕ್ಕೊಳಗಾದ 3 ತಿಂಗಳ ಹಸುಗೂಸಿಗೆ ಅಜ್ಜಿ ಮಾಡಿದ್ದನ್ನು ಕೇಳಿದ್ರೆ ಶಾಕ್ ಆಗ್ತೀರಿ!

ಮುಂಬೈ, ಬುಧವಾರ, 10 ಅಕ್ಟೋಬರ್ 2018 (08:17 IST)

ಮುಂಬೈ : ಅನಾರೋಗ್ಯಕ್ಕೊಳಗಾದ 3 ತಿಂಗಳ ಹಸುಗೂಸಿಗೆ ಖರ್ಚುಮಾಡಲು ಆಗದೆ ಅಜ್ಜಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಕೋಲ್ಹಾಪುರದಲ್ಲಿ ನಡೆದಿದೆ.

ಮಹೋಬಾತ್ಬಿ ಅಡಮ್ ಮುಲ್ಲಾ ಮಗುವನ್ನು ಕೊಂದ ಆರೋಪಿ. ಮಹೋಬಾತ್ಬಿ ಅಡಮ್ ಮುಲ್ಲಾ ಮತ್ತು ಆಕೆಯ ಮಗ ಶಬ್ಬೀರ್ ಕೂಲಿಕಾರರಾಗಿದ್ದರು. ಈ ನಡುವೆ ಶಬ್ಬೀರ್ ಮಗು ಹುಟ್ಟಿದಾಗಿನಿಂದ ಅನಾರೋಗ್ಯದಿಂದ ಬಳಲುತಿದ್ದು, ಎರಡು ತಿಂಗಳ ಕಾಲ ಮಗುವನ್ನು ಸಿಪಿಆರ್ ಸಿವಿಲ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿಡಲಾಗಿತ್ತು. ಎರಡು ತಿಂಗಳ ಬಳಿಕ ಆಸ್ಪತ್ರೆಯಿಂದ ಕರೆತಂದಾಗ  ಮಗು 1,600 ಗ್ರಾಂ ತೂಕವನ್ನು ಇತ್ತು. ಆದ್ದರಿಂದ ಮಗಳನ್ನು ನೋಡಿಕೊಳ್ಳಲು ಶಬ್ಬೀರ್ ತನ್ನ ಕೆಲಸವನ್ನು ಬಿಡಬೇಕಾಯಿತು. ಆಗ ಇಡೀ ಕುಟುಂಬದ ಜವಬ್ದಾರಿ ಮಹೋಬಾತ್ಬಿ ಮೇಲೆ ಬಿದ್ದಿದೆ.

 

ಅಲ್ಲದೇ ಮಗುವಿನ ಆರೋಗ್ಯ ಸುಧಾರಿಸಲು ಹಾಲಿನ ಪುಡಿ ಮತ್ತು ಇತರ ಔಷಧಿಗಳನ್ನು ಖರೀದಿಸಬೇಕಿತ್ತು. ಇದರಿಂದ ಬೇಸರಗೊಂಡ ಮಹೋಬಾತ್ಬಿ ಮಗುವಿನ ಜನನದಿಂದಲೇ ನಾವು ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಭಾವಿಸಿ ಕಂದಮ್ಮನನ್ನುಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ.

 

ಮಗುವನ್ನು ಆಸ್ಪತ್ರೆಗೆ ದಾಖಲಿಸಿದಾಗ ಮಗುವಿನ ಕುತ್ತಿಗೆಯ ಭಾಗದಲ್ಲಿ ಗುರುತುಗಳು ಕಾಣಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವೇಳೆ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ರಾಜರಾಂಪುರಿ ಪೊಲೀಸರು ತನಿಖೆ ನಡೆಸಿದಾಗ ಮಹೋಬಾತ್ಬಿಯ ನಡವಳಿಕೆಯಿಂದ ಅನುಮಾನಗೊಂಡು ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಾನೇ ಈ ಕೃತ್ಯ ಎಸಗಿರುವುದಾಗಿ ತಪ್ಪನ್ನು ಒಪ್ಪಿಕೊಂಡಿದ್ದಾಳೆ.

 

 ಇದೀಗ ಆಕೆಯನ್ನು ಸ್ಥಳೀಯ ನ್ಯಾಯಾಲಯದಲ್ಲಿ ಒಪ್ಪಿಸಲಾಗಿದ್ದು ಆರೋಪಿಯನ್ನು ನ್ಯಾಯಾಲಯ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮದುವೆ ನಿರಾಕರಿಸಿದ್ದಕ್ಕೆ ಯುವತಿ ಮೇಲೆ ಆಸಿಡ್ ದಾಳಿ

ಅಸ್ಸಾಂ: ಮದುವೆ ಸಂಬಂಧ ನಿರಾಕರಿಸಿದ ತಪ್ಪಿಗೆ ಈ ಯುವತಿ ಇದೀಗ ಜೀವನಪರ್ಯಂತ ಕೊರಗುವಂತೆ ಈ ದುರುಳರು ...

news

ಬ್ರಿಟನ್ ಸಂಸದರ ಕಚೇರಿಯಲ್ಲಿ ಕಸ ನಿರ್ವಹಣೆ ಮಾಡುವವರಿಗೆ ಏನೇನು ಸಿಗುತ್ತಿದೆ ಗೊತ್ತಾ?!

ಲಂಡನ್: ನಮ್ಮ ದೇಶದ ರಾಜಕೀಯ ನಾಯಕರು ಹಾದಿ ತಪ್ಪುತ್ತಿದ್ದಾರೆ ಎಂದು ನಾವು ಅಂದುಕೊಂಡಿದ್ದರೆ ಬ್ರಿಟನ್ ...

news

ಬ್ಲೂವೆಲ್ ಗೇಮ್ ಗೆ ಬಾಲಕ ಬಲಿ: ಶಂಕೆ

ಬ್ಲೂವೆಲ್ ಗೇಮ್ ಗೆ ಬಾಲಕನೊಬ್ಬ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ.

news

ಬ್ಯಾಂಕ್ ಖಾತೆ ತೆರೆಯಲು ಅವಕಾಶ ನೀಡುವಂತೆ ಆಗ್ರಹ

ಕಲಬುರಗಿ ಚಿಂಚೋಳಿ ತಾಲ್ಲೂಕಿನ ಕೋಡ್ಲಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಕೋಡ್ಲಿ ಪ್ರಗತಿ ಕೃಷ್ಣ ಗ್ರಾಮೀಣ ...

Widgets Magazine
Widgets Magazine