ಗುಪ್ತಾಂಗದಲ್ಲಿ ಕೊಕೇನ್ ಇಟ್ಟುಕೊಂಡು ಸಾಗಿಸುತ್ತಿದ್ದ ಮಹಿಳೆ ಅಧಿಕಾರಿಗಳ ಬಲೆಗೆ ಬಿದ್ಲು!

ಕೋಲ್ಕತ್ತಾ, ಬುಧವಾರ, 11 ಜುಲೈ 2018 (15:03 IST)

ಕೋಲ್ಕತ್ತಾ : 30 ವರ್ಷದ ಡೇವಿಡ್ ಬ್ಲೆಸ್ಸಿಂಗ್ ಎಂಬ ನೈಜೀರಿಯನ್ ಮಹಿಳೆ ತನ್ನ ಗುಪ್ತಾಂಗದಲ್ಲಿ 12 ಗ್ರಾಂ ಕೊಕೇನ್ ಮಾದಕ ದ್ರವ್ಯ ಸಾಗಿಸುತ್ತಿದ್ದಾಗ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.


ಮಹಿಳೆಯನ್ನು ಬಂಧಿಸಿದಾಗ  ಆಕೆಯ ಬ್ಯಾಗ್‍ನಲ್ಲಿ 20 ಬ್ಲಾಟ್ ಡ್ರಗ್ಸ್ ಇರುವುದು ಪತ್ತೆಯಾದ ಕಾರಣ ನಂತರ ಆಕೆಯನ್ನು ಕರೆದೊಯ್ದು ಕೂಲಂಕುಶವಾಗಿ ಪರಿಶೀಲಿಸಿದಾಗ ಗುಪ್ತಾಂಗದಲ್ಲೂ ಡ್ರಗ್ಸ್ ಸಾಗಿಸುತ್ತಿರುವುದು ಪತ್ತೆಯಾಗಿದೆ.


ಹಾಗೇ ಈಕೆ ಡ್ರಗ್ಸ್ ಮಾತ್ರೆಗಳನ್ನು ತನ್ನ ದೇಹದಲ್ಲಿ ಇಟ್ಟುಕೊಂಡಿದ್ದೇನೆ. ಅದನ್ನು ಹೊರತೆಗೆಯಲು ಸದ್ಯಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದಾಗ ತಕ್ಷಣ ಆಕೆಯನ್ನು ಸಮೀಪದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ದು ಎಕ್ಸ್‍ರೇ ತೆಗೆಸಿದ್ದಾರೆ. ಆಗ ತಿಳಿದುಬಂದ ವಿಚಿತ್ರವೆನೆಂದರೆ  ಆಕೆಯ ಕೆಳಹೊಟ್ಟೆಯಲ್ಲಿ ಡ್ರಗ್ಸ್ ಒಳಗೊಂಡ ಕ್ಯಾಪ್ಸೂಲ್‍ಗಳು ಪತ್ತೆಯಾಗಿವೆ ಎಂದು ಮಾದಕ ದ್ರವ್ಯ ನಿಯಂತ್ರಣ ದಳದ ಅಧಿಕಾರಿಗಳು ತಿಳಿಸಿದ್ದಾರೆ.


ಈ ಮಹಿಳೆಯನ್ನು ಬರಸಾತ್‍ನಲ್ಲಿರುವ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಯೋಕಾನ್ ಸಂಸ್ಥಾಪಕಿ ವಿರುದ್ಧ ಪ್ರತಿಭಟನೆ: ವಾಟಾಳ್ ನಾಗರಾಜ್ ಬಂಧನ, ಬಿಡುಗಡೆ

ಕನ್ನಡ ಹೋರಾಟಗಾರರು, ಸಾಹಿತಿಗಳ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿದ ಬಯೋಕಾನ್ ಮುಖ್ಯಸ್ಥೆ ಕಿರಣ್ ...

news

ಕೆಡಿಪಿ ಸಭೆಯಲ್ಲಿ ಲವ್ ಯೂ ಎಂದು ಚಾಟ್ ಮಾಡಿದ ಅಧಿಕಾರಿ

ಯಾಕೆ ರೂಪ ನನ್ನ ಪಾಡಿಗೆ ನನ್ನ ಬಿಟ್ಟು ಬಿಡು ಎಂದು ಹೇಳಿದ್ರೆ ಹೇಗೆ ನಾನು ಸಾಯಲಾ ಎಂದು ವಾಟ್ಸಪ್ ನಲ್ಲಿ ...

news

ಬಾರ್ ಮುಂದೆ ರಾಶಿಗಟ್ಟಲೇ ಆಧಾರ್ ಕಾರ್ಡ್ ಪತ್ತೆ

ಬಾರ್ ಮುಂದೆ ರಾಶಿಗಟ್ಟಲೇ ಆಧಾರ್ ಕಾರ್ಡ್ ಗಳು ಪತ್ತೆಯಾಗಿರುವ ಘಟನೆ ಭವಾನಿ ಬಾರ್ ಮುಂಭಾಗ ನಡೆದಿದೆ.

news

ಗಮನ ಬೇರೆ ಕಡೆ ಸೆಳೆದು ಕಳ್ಳತನ: ಕುಖ್ಯಾತ ಕಳ್ಳರ ಬಂಧನ

ಗಮನ ಬೇರೆ ಕಡೆಗೆ ಸೆಳೆದು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಅಂತರಾಜ್ಯ ಕಳ್ಳರ ಬಂಧಿಸುವಲ್ಲಿ ಶಹರ ಠಾಣೆ ...

Widgets Magazine