ವಾಸ್ತು ನಿಯಮಗಳನ್ನು ಪಾಲಿಸಿ ಜೀವನದಲ್ಲಿ ಸಂತೋಷವಾಗಿರಿ

ಬುಧವಾರ, 30 ಸೆಪ್ಟಂಬರ್ 2015 (19:05 IST)

ಅಪರಾಧ ಮತ್ತು ಆರ್ಥಿಕ ಹಿಂಜರಿತ ಮುಂದುವರಿಯಲಿದ್ದು, ಜನರ ಮಾನಸಿಕ, ದೈಹಿಕ ಆರೋಗ್ಯಕ್ಕೆ ಧಕ್ಕೆಯಾಗಲಿದೆ. ಹೀಗಾಗಿ ನಮ್ಮನ್ನು ರಕ್ಷಣೆ ಮಾಡುವ, ಆರೋಗ್ಯ ಮತ್ತು ಸಾಮರಸ್ಯ ಉಂಟುಮಾಡುವ ಮುಖ್ಯ ವಾಸ್ತು ಮಾರ್ಗದರ್ಶಿಕೆಗಳ ಕಡೆ ನಾವು ಗಮನವಹಿಸೋಣ. 
 
ಇದು ಪೀಠಮಂಡಲದ ಕೇಂದ್ರ ವಲಯವಾಗಿದ್ದು, ವಾಸ್ತುಪುರುಷನ ನಾಭಿಗೆ ಸಂಬಂಧಿಸಿದೆ. ಈ ಶಕ್ತಿಯ ಅಸಮತೋಲನವು ಸಂಘರ್ಷ, ದಿಢೀರ್ ನಷ್ಟ, ಶಿಕ್ಷಣದಲ್ಲಿ ಮೊಟಕು ಮತ್ತು ಹಿರಿಯರ ಜತೆ ಮನಸ್ತಾಪ ಉಂಟಾಗುವ ಸಂಭವವಿರುತ್ತದೆ.ಈ ವರ್ಷದ ಮುಖ್ಯ ದಿಕ್ಕು ಉತ್ತರವಾಗಿದ್ದು, ಸಂಪತ್ತಿನ ಅಧಿಪತಿ ಕುಬೇರನಿಂದ ಆಳಲ್ಪಡುತ್ತದೆ.
 
ಉತ್ತರದಿಕ್ಕಿನಲ್ಲಿ ಅಸಮತೋಲನದಿಂದ ಬುದ್ಧಿಮತ್ತೆ ಕುಂಠಿತಗೊಳ್ಳಬಹುದು. ಲೆಕ್ಕಪತ್ರ ವಂಚನೆಗಳು, ಅಸಮರ್ಪಕ ಮತ್ತು ಅಪ್ರಸ್ತುತ ಮಾತುಕತೆಗೆ ಕೊಡುಗೆ ನೀಡಬಹುದು, ವಿದೇಶ ಯಾತ್ರೆ ರದ್ದಾಗಬಹುದು, ಉನ್ನತ ಶಿಕ್ಷಣದಲ್ಲಿ ವೈಫಲ್ಯ ಮತ್ತು ಕಾನೂನಿನ ಸಮಸ್ಯೆ ತರಬಹುದು. ಈ ವರ್ಷದ ಮುಖ್ಯ ಬಣ್ಣ ಹಸಿರು.
ಏಳು ದೈವಾಜ್ಞೆಗಳು
 
ಹಿರಿಯರಿಗೆ
 
ನಿಮ್ಮ ಮನೆ ಅಥವಾ ಕೋಣೆಯ ಈಶಾನ್ಯ ದಿಕ್ಕನ್ನು ನೀವು ಆಕ್ರಮಿಸಿಕೊಳ್ಳಿ. ದಕ್ಷಿಣ ದಿಕ್ಕಿಗೆ ತಲೆಹಾಕಿ ಮಲಗಿ, ನಿದ್ರೆಯಿಂದ ಏಳುವಾಗ ಬಲಭಾಗದಿಂದ ಮೇಲಕ್ಕೆ ಏಳಿ. ರಾತ್ರಿ ಸುಖವಾದ ನಿದ್ರೆಗೆ ಕಪ್ಪುಹಸಿರು ಬಣ್ಣದ ಹಾಸಿಗೆ ಹೊದಿಕೆ ಬಳಸಿ. ತಾಮ್ರದ ಪಾತ್ರೆಯಲ್ಲಿ ರಾತ್ರಿ ಸಂಗ್ರಹಿಸಿಟ್ಟ ತುಳಸಿ ನೀರನ್ನು ಕುಡಿಯಿರಿ. ಕೋಣೆಯ ಮಧ್ಯಭಾಗದಲ್ಲಿ ಹಸಿರು ಚಾಪೆಯ ಮೇಲೆ ಯೋಗಾಭ್ಯಾಸ ಮಾಡಿ. ಉತ್ತರ ದಿಕ್ಕಿಗೆ ದಿನವೂ ಅರ್ಧಗಂಟೆಯ ಕಾಲ ನಡಿಗೆ ಮಾಡಿ.
 
ವೃತ್ತಿನಿರತರಿಗೆ
 
ನಿಮ್ಮ ಮನೆಯ ದಕ್ಷಿಣ, ಪಶ್ಚಿಮ ಅಥವಾ ನೈರುತ್ಯ ದಿಕ್ಕನ್ನು ಆಕ್ರಮಿಸಿಕೊಳ್ಳಿ. ನಿಮ್ಮ ಕೋಣೆಯ ಉತ್ತರದಲ್ಲಿ ನಿಮ್ಮ ಹಣದ ಥೈಲಿಯಿರಲಿ. ದಕ್ಷಿಣ ದಿಕ್ಕಿಗೆ ತಲೆಹಾಕಿಕೊಂಡು ಮಲಗಿ, ಕರ್ಟನ್‌ಗಳಿಗೆ ಮತ್ತು ಹಾಸಿಗೆಗೆ ಪ್ಯಾರೆಡೈಸ್ ಹಸಿರು ಬಣ್ಣದ ಬಟ್ಟೆ ಹಾಸಿ. ಉತ್ತರ ದಿಕ್ಕಿನಲ್ಲಿ ಓದು ಮತ್ತು ಬರಹ ಮುಂದುವರಿಸಿ ಮತ್ತು ಕೆಲಸ ಮಾಡಿ. ಮೊಬೈಲ್, ಲ್ಯಾಪ್‌ಟಾಪ್ ಮತ್ತು ಪಿಸಿ ವಾಲ್ ಪೇಪರ್ ಮತ್ತು ಕಲರ್ ಸ್ಕೀಮ್ ಹಸಿರಾಗಿರಲಿ. ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ಜಲಪಾನ ಮಾಡುವ ಮ‌ೂಲಕ ಒತ್ತಡ ತಗ್ಗಿಸಿಕೊಳ್ಳಿ.
 
ಗೃಹಿಣಿಯರಿಗೆ
 
ಹೊಸದಾಗಿ ವಿವಾಹಿತರು ವಾಯವ್ಯ ಕೋಣೆಗಳಿಗೆ ಪ್ರಥಮ ಆದ್ಯತೆ ನೀಡಿ, ಆಗ್ನೇಯ ಕೋಣೆಗಳಿಗೆ ಎರಡನೇ ಆದ್ಯತೆ ನೀಡಿ. ನಿಮ್ಮ ಮಲಗುವ ಕೋಣೆಯ ಪೂರ್ವದ ಗೋಡೆಯಲ್ಲಿ ಕನ್ನಡಿಯಿರಲಿ. ದಕ್ಷಿಣ ದಿಕ್ಕಿನಲ್ಲಿ ತಲೆಇಟ್ಟುಕೊಂಡು ಮಲಗಿ, ಬಲಭಾಗದಿಂದ ಮೇಲಕ್ಕೆ ಏಳಿ. ಹಗಲಿನಲ್ಲಿ ಹಸಿರು ಮಿಣುಕು ದೀಪದಿಂದ ಮಲಗುವ ಪ್ರದೇಶವನ್ನು ಸಕ್ರಿಯಗೊಳಿಸಿ. ಮಲಗುವ ಕೋಣೆಯಲ್ಲಿ ಟಿವಿ ಇಡಬೇಡಿ. ಹಸಿರು ಕೈವಸ್ತ್ರಗಳನ್ನು ಬಳಸಿ. ಅಧ್ಯಯನ ಸ್ಥಳದ ಈಶಾನ್ಯದಲ್ಲಿ ಹಸಿರು ಬಣ್ಣದಿಂದ ಕೂಡಿರಲಿ.
 
ವಿದ್ಯಾರ್ಥಿಗಳಿಗೆ
 
ನೀವು ಹುಡುಗರಾಗಿದ್ದರೆ ಕೋಣೆ ಅಥವಾ ಮನೆಯ ಆಗ್ನೇಯ, ಪೂರ್ವ ಅಥವಾ ದಕ್ಷಿಣ ದಿಕ್ಕನಲ್ಲಿ ವಾಸ್ತವ್ಯ ಹೂಡಿ. ಬಾಲಕಿಯಾಗಿದ್ದರೆ ವಾಯವ್ಯ, ಪಶ್ಚಿಮ ಅಥವಾ ಉತ್ತರ ದಿಕ್ಕಿನಲ್ಲಿ ವಾಸ್ತವ್ಯ ಹೂಡಿ. ಓದುವಾಗ ಹುಡುಗನಾಗಿದ್ದರೆ ಉತ್ತರದಿಕ್ಕಿನಲ್ಲಿ, ಹುಡುಗಿಯಾಗಿದ್ದರೆ ಪೂರ್ವದಿಕ್ಕಿನಲ್ಲಿ ತಿರುಗಿ ಕುಳಿತುಕೊಳ್ಳಿ. ಪೂರ್ವದಿಕ್ಕಿಗೆ ತಲೆಇರಿಸಿಕೊಂಡು ಮಲಗಿ. ಮಲಗುವ ಕೋಣೆಯಲ್ಲಿ ಕನ್ನಡಿ ಇಡುವುದು ಬೇಡ. ಕೋಣೆಯ ಕರ್ಟನ್ ಮತ್ತು ಟೇಬಲ್ ಕ್ಲಾತ್‌ಗಳು ನಿಂಬೆ ಹಳದಿ ಬಣ್ಣದ್ದಾಗಿರಲಿ. ಪ್ರತಿರಾತ್ರಿ ಓದುವ ಕೋಣೆಯಲ್ಲಿ ಸಣ್ಣ ಧ್ವನಿಯಲ್ಲಿ ನಿಮ್ಮ ಇಷ್ಟದ ಲಘುಸಂಗೀತವನ್ನು ಆಲಿಸಿ.
 
ಈ ಏಳು ದೈವಾಜ್ಞೆಗಳನ್ನು ನಿಷ್ಠರಾಗಿ ಪಾಲಿಸಿ ಉತ್ತಮ ಆರೋಗ್ಯ, ಸಾಮರಸ್ಯ ಮತ್ತು ಸಂತೋಷದ ಹಾದಿಯಲ್ಲಿ ಹೆಜ್ಜೆಹಾಕಿ.
 ಇದರಲ್ಲಿ ಇನ್ನಷ್ಟು ಓದಿ :  

ವಾಸ್ತು ಲೇಖನಗಳು

news

ದಂಪತಿಗಳು ಸುಖವಾಗಿ, ಸಂತೋಷದಿಂದಿರಲು ಆರು ವಾಸ್ತು ಸೂತ್ರಗಳು

ಯಶಸ್ವಿ ಮತ್ತು ಸಂತೋಷದ ದಾಂಪತ್ಯವು ಪ್ರತಿಯೊಬ್ಬ ನವದಂಪತಿಯ ಕನಸಾಗಿದೆ. ಸಂತಸದ ಮತ್ತು ಯಶಸ್ವಿ ವಿವಾಹವೂ ...

news

ಕುಟುಂಬಕ್ಕೆ ಸುಖ ಶಾಂತಿ ತರಲು ಕೆಲವು ಫೆಂಗ್‌ಶುಯಿ ಟಿಪ್ಸ್‌ಗಳು

ನಿಮ್ಮ ಮನೆಯ ಮುಖ್ಯ ಬಾಗಿಲಿನ ಹೊರಗೆ ಬೂಟುಗಳು ಮತ್ತು ಚಪ್ಪಲಿಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಬೇಡಿ. ...

ಭೋಜನ ಕೋಣೆ ಹೇಗಿರಬೇಕು?

ಮನೆಯ ಕೋಣೆಗಳ ಬಗ್ಗೆ ಉಲ್ಲೇಖಿಸುವಾಗ ಭೋಜನ ಕೋಣೆಯ ಬಗ್ಗೆಯೂ ಗಮನ ಹರಿಸಬೇಕಾದುದು ಮುಖ್ಯ. ಯಾಕೆಂದರೆ ನಾವು ...

ಭೋಜನ ಕೋಣೆ ಹೇಗಿರಬೇಕು?

ಮನೆಯ ಕೋಣೆಗಳ ಬಗ್ಗೆ ಉಲ್ಲೇಖಿಸುವಾಗ ಭೋಜನ ಕೋಣೆಯ ಬಗ್ಗೆಯೂ ಗಮನ ಹರಿಸಬೇಕಾದುದು ಮುಖ್ಯ. ಯಾಕೆಂದರೆ ನಾವು ...