ಈ ಚಟ್ನಿ ಮಾಡಿ ನೋಡಿ ಮಕ್ಕಳು ಬಾಯಿ ಚಪ್ಪರಿಸಿಕೊಂಡು ತಿಂತಾರೆ

ಬೆಂಗಳೂರು, ಸೋಮವಾರ, 11 ಡಿಸೆಂಬರ್ 2017 (11:40 IST)

Widgets Magazine

ಬೆಂಗಳೂರು: ಹೆಚ್ಚಾಗಿ ಮಕ್ಕಳು ಬೆಳಿಗ್ಗಿನ ತಿಂಡಿಗಳಾದ ದೋಸೆ, ಇಡ್ಲಿಗಳನ್ನು ತಿನ್ನುವಾಗ ಜೊತೆಗೆ ಚಟ್ನಿ ಹಾಕಿದರೆ ಅದನ್ನು ತಿನ್ನುವುದೆ ಇಲ್ಲ. ಬದಲಾಗಿ ಸಾಂಬಾರು ಮಾಡಿಕೊಡುವಂತೆ ಗಲಾಟೆ ಮಾಡುತ್ತಾರೆ. ಬಿಡುವೆ ಇಲ್ಲದ ಮನೆ ಕೆಲಸದ ನಡುವೆ ಚಟ್ನಿ, ಸಾಂಬಾರು ಅಂತ ಎರಡೆರಡು ಬಗೆ ಮಾಡುತ್ತಾ ಕುಳಿತ್ತರೆ ಬೇರೆ ಕೆಲಸಗಳು ಮುಗಿಯುವುದೆ ಇಲ್ಲ. ಅದಕ್ಕಾಗಿ ಮಕ್ಕಳಿಗೆ ದೋಸೆ, ಇಡ್ಲಿಗಳನ್ನು ತಿನ್ನಲು ಜೊತೆಗೆ ಟೊಮೆಟೊ ಚಟ್ನಿ ಮಾಡಿಕೊಡಿ. ಆವಾಗ ನೋಡಿ ನೀವು ಬೇಡ ಎಂದರು ಬಿಡದೆ ಟೊಮೊಟೊ ಚಟ್ನಿ ತಿಂದು ಮುಗಿಸುತ್ತಾರೆ.


ಬೇಕಾಗಿರುವ ಸಾಮಗ್ರಿ:
ಟೊಮೊಟೊ- 1 ಅಥವಾ 2, ದನಿಯಾ-1/4 ಚಮಚ, ಬ್ಯಾಡಗಿ ಮೆಣಸು- 2, ಬೆಳ್ಳುಳ್ಳಿ-1ಎಸಳು, ತೆಂಗಿನತುರಿ-1/2 ಕಪ್, ಉಪ್ಪು.


ಮಾಡುವ ವಿಧಾನ:
ದನಿಯಾ ಹಾಗು ಬ್ಯಾಡಗಿ ಮೆಣಸನ್ನು ಬೇರೆ ಬೇರೆಯಾಗಿ ಹುರಿದಿಟ್ಟುಕೊಳ್ಳಿ, ಟೊಮೊಟೊವನ್ನು ಗ್ಯಾಸ್ ನಲ್ಲಿ ಅದರ ಸಿಪ್ಪೆ ಸ್ವಲ್ಪ ಕಪ್ಪಾಗುವವರೆಗು ಸುಟ್ಟುಕೊಂಡು ನಂತರ ಅದರ ಸಿಪ್ಪೆ ತೆಗೆದು ಇಟ್ಟುಕೊಳ್ಳಿ.
ನಂತರ ಮಿಕ್ಸಿಯಲ್ಲಿ ದನಿಯಾ, ಉಪ್ಪು, ಬ್ಯಾಡಗಿ ಮೆಣಸನ್ನು ನೀರು ಹಾಕದೆ ಸ್ವಲ್ಪ ಪುಡಿಮಾಡಿಕೊಳ್ಳಿ. ಆಮೇಲೆ ಬೆಳ್ಳುಳ್ಳಿ ಹಾಕಿ ಮತ್ತೆ ಪುಡಿಮಾಡಿ. ನಂತರ ಅದಕ್ಕೆ ತೆಂಗಿನತುರಿ, ಟೊಮೊಟ ಹಾಗು ಸ್ವಲ್ಪ ನೀರು ಹಾಕಿ  ತರಿತರಿಯಾಗಿ ರುಬ್ಬಿ.ಉಪ್ಪು ಬೇಕಾದಲ್ಲಿ ಹಾಕಿಕೊಳ್ಳಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಗೊರಕೆಯ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು: ಗೊರಕೆ ಹೊಡೆಯುವವರಿಗೆ ಆ ಶಬ್ದ ಕಿರಿಕಿರಿ ಮಾಡಲ್ಲ ಆದರೆ ಪಕ್ಕದಲ್ಲಿ ಮಲಗಿರುವವರಿಗೆ ಮಾತ್ರ ...

news

ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಮುರುಡೇಶ್ವರ

ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿರುವ ಮುರುಡೇಶ್ವರ ದೇವಾಲಯವು ಧಾರ್ಮಿಕ ಪುಣ್ಯ ...

news

ಹುಟ್ಟುವ ಮಗು ಗಂಡೊ, ಹೆಣ್ಣೊ ಎಂದು ತಿಳಿಯುವುದು ಹೇಗೆ ಗೊತ್ತಾ…?

ಬೆಂಗಳೂರು: ತಾನು ಗರ್ಭಿಣಿ ಎಂದು ತಿಳಿದ ಬಳಿಕ ತಾಯಿಗೆ ತನ್ನ ಗರ್ಭದಲ್ಲಿರುವ ಮಗು ಗಂಡೊ, ಹೆಣ್ಣೊ ಎಂಬ ...

news

ಮಧುಮೇಹಿಗಳು ಬೆಲ್ಲ ತಿನ್ನಬಹುದೇ?

ಬೆಂಗಳೂರು: ಸಕ್ಕರೆಗೆ ಹೋಲಿಸಿದರೆ ಬೆಲ್ಲ ಹೆಚ್ಚು ಆರೋಗ್ಯಕರೆ ಎಂದು ಹೇಳಲಾಗುತ್ತದೆ. ಹಾಗಿದ್ದರೂ ...

Widgets Magazine