ಅರ್ಧಮತ್ಸ್ಯೇಂದ್ರಾಸನದ ವಿಧಾನಗಳು

ಕಟಿಭಾಗದ ಸ್ನಾಯುಗಳು, ಮೀನಖಂಡ, ತೋಳುಗಳಿಗೆ ಉತ್ತಮ ವ್ಯಾಯಾಮ ನೀಡುವ ಆಸನ ಅರ್ಧಮತ್ಸ್ಯೇಂದ್ರಾಸನ. ಈ ಆಸನ ಹಾಕುವ ವೇಳೆ ಬೆನ್ನು ಹುರಿಯು ಅರ್ಧಕ್ಕೆ ತಿರುವುತ್ತದೆ. ಹಠಯೋಗಿ ಮತ್ಸೇಂದ್ರನಾಥರಿಂದ ಈ ಆಸನಕ್ಕೆ ಎಂಬ ಹೆಸರು ಬಂದಿದೆ.

ಅರ್ಧ ಎಂಬುದು ಸಂಸ್ಕೃತ ಪದ. ಅರ್ಧ ಮತ್ಸೇಂದ್ರಾಸನವು ಬಾಗುವಭಂಗಿಗಳ ಒಂದ ಶ್ರೇಷ್ಠ ಆಸನ. ತೋಳು ಮತ್ತು ಮೊಣಕಾಲುಗಳು ಮತ್ತು ಕಟಿಭಾಗವು ಇಲ್ಲಿ ಅತಿ ಹೆಚ್ಚು ಭಾಗುವ ಇಲ್ಲ ತಿರುಗುವ ಅಂಗಗಳಾಗಿರುತ್ತವೆ.

ಅರ್ಧ ಮತ್ಸೇಂದ್ರಾಸನ ಮಾಡುವ ವಿಧಾನ

WD

•ನೇರವಾಗಿ ಕುಳಿತುಕೊಳ್ಳಿ

•ಕಾಲುಗಳನ್ನು ಹೊರಕ್ಕೆ ಚಾಚಿ

•ಹಿಮ್ಮಡಿ ಗುದಭಾಗದ ಕೆಳಕ್ಕಿರಲಿ

•ಬಲತೊಡೆಯನ್ನು ನೆಟ್ಟಗೆ ಚಾಚಿ

•ಈಗ ನಿಮ್ಮ ಎಡಪಾದವನ್ನು ನೆಲದಮೇಲಿಡಿ

•ಬಡ ಮೊಣಕಾಲನ್ನು ಅಡ್ಡವಾಗಿಸಿ

•ನಿಮ್ಮ ಎಡ ಮೊಣಕಾಲು ಬಲಮೊಣಕಾಲಿನ ಸಮೀಪದಲ್ಲಿರಬೇಕು

•ನಿಮ್ಮ ಬಲತೋಳನ್ನು ಎಡ ಮೊಣಕಾಲಿನ ಮೇಲೆ ಹಾಯಿಸಿ.
•ಬಲ ತೋಳನ್ನು ಎಡ ಮೀನಖಂಡಕ್ಕೆ ನೇರವಾಗಿಸಿ

•ಎಡಗಾಲಿನ ಹೆಬ್ಬೆರಳನ್ನು ಬಲಗೈ ಹೆಬ್ಬೆರಳು, ತೋರುಬೆರಳು ಮತ್ತು ನಡುಬೆರಳುಗಳಿಂದ ಹಿಡಿಯಿರಿ.

•ನಿಮ್ಮ ಎಡಗೈಯನ್ನು ನಿತಂಬದ ಕೆಳಭಾಗಕ್ಕೆ ಜಾರಿಸಿ ಮತ್ತು ಎಡತೊಡೆಯನ್ನು ಬಿಗಿಗೊಳಿಸಿ

•ನಿಮ್ಮ ಭುಜ, ಕತ್ತು, ಮತ್ತು ತಲೆಯನ್ನು ಏಕಕಾಲಕ್ಕೆ ಎಡಕ್ಕೆ ತಿರುವಿ

•ಎಡ ಭುಜದ ನೇರಕ್ಕೆ ನಿಮ್ಮ ಗಲ್ಲವನ್ನು ತನ್ನಿ

•ಎಷ್ಟು ಸಾಧ್ಯವೋ ಅಷ್ಟು ಹಿಂದಕ್ಕೆ ದೃಷ್ಟಿ ಹಾಯಿಸಿ

•ನಿಮ್ಮ ತಲೆ ಮತ್ತು ಬೆನ್ನುಮೂಳೆಯನ್ನು ನಿಗುರಿಸಿ

•ಸಾಧ್ಯವಾದಷ್ಟು ಹೊತ್ತು ಈ ಭಂಗಿಯಲ್ಲಿರಿ

•ನಿಧಾನಕ್ಕೆ ಮೊದಲಿನ ಸ್ಥಿತಿಗೆ ಬನ್ನಿ

•ಈ ಆಸನವನ್ನು ಇನ್ನೊಂದು ಬದಿಗೆ ಪುರನಾವರ್ತಿಸಿ

ಅನುಕೂಲಗಳು
ಬೆನ್ನುಹುರಿ, ಅದರಲ್ಲೂ ವಿಶೇಷವಾಗಿ ಕಟಿಭಾಗವು ಮಣಿಯುತ್ತದೆ. ಈ ಆಸನವನ್ನು ನಿಯಮಿತವಾಗಿ ಮಾಡುವುದರಿಂದ ಸೊಂಟದಭಾಗದ ಬೊಜ್ಜು ಕರಗುತ್ತದೆ.
ಈ ಅಸನದಿದಂದ ಸೊಂಟದ ಎಲ್ಲಾ ಭಾಗಗಳಿಗೂ ವ್ಯಾಯಮ ದೊರೆಯುತ್ತದೆ

ಎಚ್ಚರಿಕೆ
ಬೆನ್ನುಹುರಿ ಇಲ್ಲವೇ ಹೊಟ್ಟೆಗೆ ಸಂಬಂಧಿಸಿದ ಯಾವುದಾದರೂ ರೋಗದಿಂದ ನೀವು ಬಳಲುತ್ತಿದ್ದರೆ ದಯವಿಟ್ಟು ಈ ಆಸನ ಮಾಡದಿರಿ.ಇದರಲ್ಲಿ ಇನ್ನಷ್ಟು ಓದಿ :  

ಸಂಬಂಧಿಸಿದ ಸುದ್ದಿ

ಯೋಗ

ಪದ್ಮಾಸನ

ಪದ್ಮ ಎಂದರೆ ತಾವರೆ, ಕಮಲ ಎಂದರ್ಥ. ಇದು ಸಂಸ್ಕೃತ ಜನ್ಯ ನಾಮ. ಪದ್ಮ ಆಕಾರದ ಭಂಗಿಯನ್ನೇ ಪದ್ಮಾಸನ ...

ವಜ್ರಾಸನ ಹಾಕೋದು ಹೇಗೆ?

ಕಳೆದ ವಾರ ಪದ್ಮಾಸನದ ಬಗ್ಗೆ ತಿಳಿದುಕೊಂಡಿದ್ದೆವು. ಪದ್ಮಾಸನವನ್ನು ನೀವೀಗ ಪಳಗಿಸಿಕೊಂಡಿದ್ದೀರಿ. ಬನ್ನಿ ಈ ...

ಶವಾಸನ

ಸಂಸ್ಕೃತದಲ್ಲಿ ಶವ ಮತ್ತು ಆಸನ ಅಂದರೆ 'ಮೃತದೇಹ' ಮತ್ತು 'ವ್ಯಾಯಾಮ' ಎಂದರ್ಥ. ಹಾಗಾಗಿ ಶವಾಸನ ಮಾಡುವ ...

ಯೋಗಾಭ್ಯಾಸ ಆರಂಭಿಸುವ ಮುನ್ನ ನೆನಪಿಡಿ...

1. ಯೋಗದ ಬಗ್ಗೆ ಅಭ್ಯಾಸ ಆರಂಭಿಸುವುದಕ್ಕೆ ಮುನ್ನ ಪ್ರತಿಯೊಬ್ಬರೂ ಸೂಕ್ತ ತಜ್ಞರಿಂದ ಮಾರ್ಗದರ್ಶನ ...

Widgets Magazine