ವಿಪರೀತ ಕರಣಿ ಆಸನ

ಸಂಸ್ಕೃತದಲ್ಲಿ ವಿಪರೀತ ಅಂದರೆ ತಲೆಕೆಳಗೆ ಎಂದೂ, ಕರಣಿ ಎಂದರೆ ಕ್ರಿಯೆ ಎಂದೂ ಅರ್ಥ. ಈ ಹಾಕುವ ವೇಳೆಗೆ ಶರೀರವು ತಲೆಕೆಳಗಾಗುವ ಸ್ಥಿತಿಗೆ ಬರುವುದರಿಂದ ಇದಕ್ಕೆ ವಿಪರೀತ ಕರಣಿ ಎಂದು ಹೆಸರು.

ಈ ಆಸನಕ್ಕೆ ಮೂರು ಹಂತಗಳಿವೆ. ಇವುಗಳನ್ನು ಒಂದರ ನಂತರ ಮತ್ತೊಂದಾಗಿ ಮಾಡಬೇಕಿದೆ. ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಮುಂದುವರಿಯಬೇಕಿರುವುದು ಈ ಆಸನದ ವೈಜ್ಞಾನಿಕ ಕ್ರಮವಾಗಿದೆ.

ವಿಧಾನ
ವ್ಯಾಯಾಮದ ಚಾಪೆಯಲ್ಲಿ ಅಂಗಾತ ಮಲಗುವ ಮೂಲಕ ಈ ಆಸನದ ಆರಂಭ. ನಿಮ್ಮ ಕಾಲುಗಳನ್ನು ಜೋಡಿಸಿಡಿ. ಕೈಗಳು ದೇಹದ ಇಬ್ಬದಿಯಲ್ಲಿರಲಿ. ನಿಧಾನಕ್ಕೆ ಆಳವಾಗಿ ಉಸಿರಾಡಿ. ನೀವು ಉಸಿರಾಡುತ್ತಿರುವಾಗಲೆ ಕೆಳಗಿನ ಪ್ರಕ್ರಿಯೆಗಳನ್ನು ಮುಂದುವರಿಸಿ. ನಿಮ್ಮ ಅಂಗೈಗಳನ್ನು ನೆಲಕ್ಕೆ ಊರಿ. ನಿಮ್ಮ ಎರಡೂ ಕಾಲುಗಳನ್ನು ಒಟ್ಟಾಗಿ ಮೇಲಕ್ಕೆತ್ತಿ. ಕಾಲುಗಳು ನೆಲಕ್ಕೆ ಲಂಬಕೋನದಂತಿರಲಿ. ಪಾದಗಳು ನಿಮ್ಮ ತಲೆಗೆ ನೇರವಾಗಿರಬೇಕು. ಮೊಣಕಾಲುಗಳನ್ನು ಬಗ್ಗಿಸಬೇಡಿ ಅಥವಾ ಕೈಗಳನ್ನು ಮೇಲೆತ್ತಬೇಡಿ. ಉಸಿರಾಟವನ್ನು ಪೂರ್ಣಗೊಳಿಸಿ ಮತ್ತು ಉಸಿರನ್ನು ಐದು ಸೆಕುಂಡುಗಳ ಕಾಲ ತಡೆಯಿರಿ. ನಿಧಾನಕ್ಕೆ ಉಸಿರನ್ನು ಸಂಪೂರ್ಣವಾಗಿ ಹೊರಬಿಡಿ. ಮತ್ತು ಉಸಿರಾಟವನ್ನು ಐದು ಸೆಕುಂಡುಗಳ ಕಾಲ ತಡೆಯಿರಿ. ನಂತರ ಪುನ ಉಸಿರನ್ನು ನಿಧಾವಾಗಿ, ಆದರೆ ಆಳವಾಗಿ ಒಳಗೆಳೆದುಕೊಳ್ಳಿ. ಐದು ಸೆಕುಂಡುಗಳ ಕಾಲ ಉಸಿರು ತಡೆಹಿಡಿದು ಉಸಿರು ಹೊರಹಾಕುವ ಪ್ರಕ್ರಿಯೆ ಆರಂಭಿಸಿ.

WD


ಎರಡನೆಯ ಹಂತ
ನೀವು ಉಸಿರಾಟ ನಡೆಸುತ್ತಿರುವಂತೆಯೇ, ಅದೇ ಸ್ಥಿತಿಯಿಂದ ಈ ಹಂತವನ್ನು ಮುಂದುವರಿಸಿ. ದೇಹದ ಇಕ್ಕೆಲಗಳಲ್ಲಿರುವ ಕೈಗಳನ್ನು ಬಾಗಿಸಿ ಅವುಗಳನ್ನು ಸನ್ನೆಗಳಂತೆ ಆಧರಿಸಿಕೊಂಡು ಸೊಂಟವನ್ನು ಮೇಲಕ್ಕೆತ್ತಿ. ಕಾಲುಗಳು ನೇರವಾಗಿ, ಭಾಗದೆ ನೆಟ್ಟಗಿರಲಿ. ಉಸಿರನ್ನು ಸಂಪೂರ್ಣ ಹೊರಹಾಕುವ ತನಕ ಇದೇ ಭಂಗಿಯಲ್ಲಿರಿ. ಆಳವಾಗಿ ಉಸಿರೆಳೆದು ನಿಧಾನಕ್ಕೆ ಹೊರಬಿಡಿ. ಸ್ವಲ್ಪ ಹೊತ್ತು ಸಹಜವಾಗಿ ಉಸಿರಾಡಿ.

ತೃತೀಯ ಹಂತ
ಅಂಗೈಯನ್ನು ಮತ್ತೆ ಊರಿ. ತಲೆ ಅಥವಾ ಮೊಣಕಾಲನ್ನು ಎತ್ತದೆಯೇ ನಿಮ್ಮ ಕಾಲುಗಳನ್ನು ತಲೆಯತ್ತ ಚಲಾಯಿಸಿ. ನಿಮ್ಮ ಪೃಷ್ಠ ಹಾಗೂ ಬೆನ್ನಿನ ಭಾಗವನ್ನು ಸ್ವಲ್ಪವೇ ಮೇಲೆತ್ತಿ. ನಿಮ್ಮ ಬೆನ್ನುಹುರಿಯ ಕೆಳಭಾಗವನ್ನು ಭಾಗಿಸಿ. ನಿಮ್ಮ ಕಾಲುಗಳನ್ನು ನೆಲಕ್ಕೆ ಸಮಾನಾಂತರವಾಗಿಸಿ. ಮೊಣಕೈಭಾಗದಲ್ಲಿ ಕೈಗಳನ್ನು ಭಾಗಿಸಿ. ಸೊಂಟಕ್ಕೆ ಅಂಗೈಯ ಆಧಾರ ಪಡೆದುಕೊಳ್ಳಿ. ಪೃಷ್ಠದ ಮೇಲ್ಭಾಗದಲ್ಲಿ ಎರಡೂ ಭಾಗಗಳನ್ನು ಅಂಗೈಯಿಂದ ಒತ್ತಿ ಹಿಡಿಯಿರಿ. ಈ ಭಂಗಿಯಲ್ಲಿ ಐದು ನಿಮಿಷಗಳ ಕಾಲ ಇರಿ. ನಿಧಾನವಾಗಿ ಆದರೆ ಆಳವಾಗಿ ಉಸಿರೆಳೆದುಕೊಂಡು ಕಾಲುಗಳನ್ನು ಲಂಬಸ್ಥಿತಿಗೆ ಮರಳಿಸಿ. ನಿಮ್ಮ ಮೊಣಕೈಗಳನ್ನು ಆಧಾರವಾಗಿಸಿ. ಸಹಜ ಉಸಿರಾಟ ಮುಂದುವರಿಸಿ. ನಿಮ್ಮ ಪಾದಗಳು ಮತ್ತು ಮೊಣಕಾಲುಗಳನ್ನು ನೇರವಾಗಿ ಮತ್ತು ಒಟ್ಟಾಗಿಸಿ. ದೃಷ್ಟಿಯು ಕಾಲಿನ ಹೆಬ್ಬೆರಳನ್ನು ದಿಟ್ಟಿಸುತ್ತಿರಲಿ. ಮೂರು ನಿಮಿಷ ಈ ಭಂಗಿಯಲ್ಲಿದ್ದು ಮೊದಲಿನ ಸ್ಥಿತಿಗೆ ಮರಳಿ

ಉಪಯೋಗಗಳು
ಈ ಆಸನವು ಪೆಲ್ವಿಕ್ ಸರ್ಕುಲೇಶನನ್ನು ನಿಯಂತ್ರಿಸುತ್ತದೆ. ಕತ್ತು, ಮೆದುಳು ಮತ್ತು ಜಠರಕ್ಕೆ ರಕ್ತ ಸರಬರಾಜು ಹೆಚ್ಚಿಸುತ್ತದೆ. ಅಡ್ರಿನಲ್, ಗೊನಾಡ್, ಪಿಟ್ಯುಟರಿ ಮತ್ತು ಥೈರಾಯಿಡ್ ಗ್ರಂಥಿಗಳ ಕಾರ್ಯಕ್ಷಮತೆಯನ್ನು ವೃದ್ಧಿಸುತ್ತದೆ.

ಎಚ್ಚರಿಕೆ
90 ಡಿಗ್ರಿ ಕೋನಕ್ಕೆ ತಲುಪಿದ ಬಳಿಕ ನಿಮ್ಮ ಕಾಲುಗಳನ್ನು ದೂಡಬೇಡಿ. ಅಂತೆಯೇ ಮೊಣಕಾಲನ್ನು ಬಗ್ಗಿಸುವುದೂ ಸಹ ಅಪಾಯಕಾರಿ.ಇದರಲ್ಲಿ ಇನ್ನಷ್ಟು ಓದಿ :  

ಯೋಗ

ಪಶ್ಚಿಮೋತ್ಥಾನಾಸನ

ಕೈಗಳನ್ನು ಮುಂದಕ್ಕೆ ಚಾಚಿ ಮತ್ತು ಉಸಿರು ಒಳಗೆಳೆದುಕೊಳ್ಳುವ ವೇಳೆ ಭುಜಕ್ಕಿಂತ ಮೇಲೆತ್ತಿ. ಬೆನ್ನು ...

ಪದ್ಮಾಸನ

ಪದ್ಮ ಎಂದರೆ ತಾವರೆ, ಕಮಲ ಎಂದರ್ಥ. ಇದು ಸಂಸ್ಕೃತ ಜನ್ಯ ನಾಮ. ಪದ್ಮ ಆಕಾರದ ಭಂಗಿಯನ್ನೇ ಪದ್ಮಾಸನ ...

ವಜ್ರಾಸನ ಹಾಕೋದು ಹೇಗೆ?

ಕಳೆದ ವಾರ ಪದ್ಮಾಸನದ ಬಗ್ಗೆ ತಿಳಿದುಕೊಂಡಿದ್ದೆವು. ಪದ್ಮಾಸನವನ್ನು ನೀವೀಗ ಪಳಗಿಸಿಕೊಂಡಿದ್ದೀರಿ. ಬನ್ನಿ ಈ ...

ಸುಪ್ತ ವಜ್ರಾಸನ

ಮೊದಲು ವಜ್ರಾಸನ ಹಾಕಿ ಕುಳಿತುಕೊಳ್ಳಿ.

Widgets Magazine