WD ಮಳೆ,ಗಾಳಿ, ಬಿಸಿಲೆನ್ನದೆ ಇದು ನನ್ನ ಕರ್ತವ್ಯವೆಂದು ತಿಳಿದು ಸದಾ ಕೆಲಸದಲ್ಲಿ ನಿರತರಾಗಿರುವ ನೀವು ಹಣ ಸಂಪಾದನೆ ಮಾಡಿದ ನಂತರವೂ ನಡೆದುಬಂದ ದಾರಿಯನ್ನು ಮರೆಯುವುದಿಲ್ಲ. ಏಣಿಯಂತೆ ಇರುವ ನೀವು ಉಳಿದವರನ್ನು ಮೇಲೇರಿಸುತ್ತೀರಿ.ಎಂದಿಗೂ ಅಧರ್ಮದತ್ತ ಕಣ್ಣು ಹಾಯಿಸುವುದಿಲ್ಲ.ಹುಳಿಯೊಂದಿಗೆ ಸಿಹಿಯನ್ನು ಮೆಲ್ಲಲು ಇಷ್ಟಪಡುವ ನೀವು ನಿಸರ್ಗ ನೀಡುವ ಆಹಾರದಿಂದ ಪುಷ್ಟಿ ಪಡೆಯುತ್ತೀರಿ.ನಿಮ್ಮ ರಾಶಿಯ ಏಳನೆಯ ಸ್ಥಾನದಲ್ಲಿ ನಿಲ್ಲುವ ಅಷ್ಟಮಾಧಿಪತಿ ಗುರುಭಗವಾನ್ 16-11-2007 ರಿಂದ 30-11-2007 ರವರೆಗೆ 8ನೇ ಸ್ಥಾನದಲ್ಲಿ ಕುಳಿತು ಅಧಿಕಾರ ನಡೆಸುತ್ತಾನೆ.