WD ಕೊಳ್ಳು-ಕೊಡುಗೆ ವ್ಯವಹಾರದಲ್ಲಿ ನಿಸ್ಸೀಮರಾದ ನೀವು ಒಳ್ಳೆಯ ಸಮರ್ಥ ನಾಯಕರು. ಸುತ್ತಲಿನ ವ್ಯವಹಾರವನ್ನು,ಪರಿಸ್ಥಿತಿಯನ್ನು ಚೆನ್ನಾಗಿ ತಿಳಿದು ಸಮಯೋಚಿತ ಬುದ್ಧಿವಂತಿಕೆಯೊಂದಿಗೆ ಜೀವನದ ಚದುರಂಗದಲ್ಲಿ ಚಾತುರ್ಯದಿಂದ ಕಾಯಿಗಳನ್ನು ಜರುಗಿಸುವುದು ನಿಮ್ಮ ರಾಜತಂತ್ರ. ದ್ರವ ಆಹಾರವನ್ನು ಇಷ್ಟಪಟ್ಟು ಸೇವಿಸುವ ನೀವು ಕಲೆಯಲ್ಲಿ ವಿಶೇಷ ಅಕ್ಕರೆಯನ್ನು ಪಡೆದಿರುತ್ತೀರಿ.ಗುರುಭಗವಾನ್ ನಿಮ್ಮ ರಾಶಿಗೆ ಭಾಗ್ಯಾಧಿಪತಿಯೂ ಆಗಿರುವುದರಿಂದ ದುಷ್ಫಲಗಳು ತಾನಾಗಿಯೇ ಕಡಿಮೆಯಾಗುತ್ತದೆ. ಉನ್ನತ ವಿದ್ಯಾಭ್ಯಾಸ ಭವಿಷ್ಯ ಜೀವನಕ್ಕಾಗಿ ಹೆಚ್ಚು ದುಡಿಯಬೇಕಾಗುತ್ತದೆ. ಗುರುಭಗವಾನ್ ಧನಸ್ಧಾನದಲ್ಲಿರುವುದರಿಂದ ಅಗತ್ಯವಿರುವ ಜಾಗದಲ್ಲಿ ಹಣವೂ,ತಕ್ಕಸಮಯದಲ್ಲಿ ಪ್ರಭಾವಿ ವ್ಯಕ್ತಿಗಳಿಂದ