WD ಮುಗುಳ್ನಗೆಯೊಂದಿಗೆ ಎಲ್ಲರನ್ನೂ ಆಕರ್ಷಿಸುವವರೇ! ಏಕಕಾಲದಲ್ಲಿ ಹಲವಾರು ಕೆಲಸಗಳನ್ನು ನಿರ್ವಹಿಸುವ ಸಾಮರ್ಥ್ಯವುಳ್ಳವರೇ! ತುಂಬೆ ಹೂವಿನಂತೆ ನಿರ್ಮಲವಾದ ಉಡುಪನ್ನು ಧರಿಸುವವರೇ! ನಿಮ್ಮ ಮನಸ್ಸು ಸಹ ಹಾಗೆಯೇ ನಿರ್ಮಲವಾಗಿದೆ. ಎಲ್ಲರೊಂದಿಗೆ ಮನಬಿಚ್ಚಿ ಮಾತನಾಡುವ ನೀವು ಇತರರ ಅಂತರಂಗದ ವಿಷಯಗಳಲ್ಲಿ ಎಂದಿಗೂ ತಲೆಹಾಕುವುದಿಲ್ಲ. ಹೋರಾಟ ಮತ್ತು ಹೊಸತನವನ್ನು ಬಯಸುವ ನೀವು ಹಿರಿಯರನ್ನು ಗೌರವದಿಂದ ಕಾಣಲು ಎಂದೂ ಮರೆಯುವುದಿಲ್ಲ.ಯಾರು ಏನನ್ನೇ ಕೇಳಲಿ ಯೂವ ಸಮಯದಲ್ಲಾದರೂ ಸರಿಯೇ ಧಾರಾಳವಾಗಿ ಮನಸಾರೆ ದಾನಮಾಡಿದ ದೂನಶೂರ ಕರ್ಣನನ್ನು ಈ ಜಗತ್ತಿಗೆ