WD ತಾನಾಯ್ತು, ತನ್ನ ಮಕ್ಕಳಾಯ್ತು, ಮನೆ ಇದೆ , ತಿನ್ನಲು ಇದೆ ಬೇರೇನು ಬೇಡವೆಂದು ಹೇಳದೆ ದೇಶ, ತಾಯ್ನುಡಿ ಮೇಲೆ ಅಪಾರ ಪ್ರೀತಿಯಿರಿಸಿಕೊಂಡಿದ್ದೀರಿ. ಬೇರೇನೂ ಪ್ರತಿಫಲ ನಿರೀಕ್ಷಿಸದೆ ಯಾವುದೇ ಕೆಲಸಕ್ಕೆ ಸಹಾಯ ಮಾಡುತ್ತೀರಿ. ಒಂದೇ ನಿಮಿಷದಲ್ಲಿ ಎದುರಿನಲ್ಲಿರುವವರ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವಿದೆ ನಿಮಗೆ. ಜೀವನದಲ್ಲಿ ಏನೆಲ್ಲಾ ಕಷ್ಟಗಳು ಎದುರಾದರೂ ಎಲ್ಲವನ್ನು ಸಹನೆಯಿಂದ ಅನುಭವಿಸಿದ್ದೀರಿ. ಇದುವರೆಗೆ ನಿಮ್ಮ ರಾಶಿಯಲ್ಲಿ ವ್ಯಯಸ್ಥಾನದಲ್ಲಿದ್ದು ಅಪಾರವಾದ ಖರ್ಚುಗಳನ್ನು ಮಾಡಿಸುತ್ತಿದ್ದ ಗುರುಭಗವಾನ್ ಇನ್ನು ಮುಂದೆ ನಿಮ್ಮ