WD ಮರೆತುಬಿಡೋಣ, ಕ್ಷಮಿಸಿಬಿಡೋಣ ಎಂಬ ಉದಾರ ಮನಸ್ಸಿನಿಂದ ಇರುವ ನೀವು ಸದಾ ಹೃದಯದಾಳದಿಂದಲೇ ಮಾತನಾಡುತ್ತೀರಿ. ಪರಂಪರಾಗತವಾಗಿ ಬಂದಿರುವ ಕೆಲಸಗಳನ್ನು ನಂಬಿಕೆಗಳನ್ನೂ ರಕ್ಷಣೆ ಮಾಡುವುದರಲ್ಲಿ ಆದರ ತೋರಿಸುತ್ತೀರಿ. ತನ್ನದೇ ಬೇರಿ ದಾರಿಯೆಂದು ಎಂದಿಂದಿಗೂ ಸ್ವಂತ ಯೋಚಿಸಿದವರಲ್ಲ ನೀವು. ಜೀವನದಲ್ಲಿ ಹಲವಾರು ಏರುತಗ್ಗುಗಳನ್ನು ಎದುರಿಸಿರುವ ನೀವು ತಾಳ್ಮೆಯಿಂದಲೇ ಎಲ್ಲವನ್ನೂ ನಿಭಾಯಿಸಿದ್ದೀರಿ. ಹಣಕ್ಕಿಂತ ಹೆಚ್ಚಿನ ಮಹತ್ವ ಗುಣಕ್ಕೆ ನೀಡಿದ್ದೀರಿ. ಭೂಮಿಯಂತೆ ಸಹನೆಯುಳ್ಳ ನೀವು ಕಾರ್ಯಕಾರಣವಿಲ್ಲದೆ ಯಾವುದನ್ನೂ ಮಾಡುವುದಿಲ್ಲ. ಕೊಡುವುದರಲ್ಲಿಯೇ ತೃಪ್ತಿಪಡುವ ನೀವು ಬೇರೆಯವರ ಹಂಗಿನಲ್ಲಿ