WD ನೆಮ್ಮದಿಯನ್ನು ಬಯಸುವ ನೀವು ಯಾವುದೇ ಬಗೆಯ ಗದ್ದಲವಿಲ್ಲದೇ ಎಲ್ಲವನ್ನೂ ಸಾಧಿಸುತ್ತೀರಿ. ಮರೆಯಲ್ಲಿ ಚಿಂತನೆ ಮಾಡಿ ನೇರವಾಗಿ ಕಾರ್ಯೋನ್ಮುಖರಾಗುವ ನೀವು ಯಾರಿಗೂ ಕೆಡುಕನ್ನು ಬಯಸುವವರಲ್ಲ. ಒಳ್ಳೆಯ ಮಾರ್ಗದಲ್ಲಿಯೇ ವಿವೇಚನೆಯಿಂದ ನಡೆಯುತ್ತೀರಿ. ನೀವು ಸುಖವಾಗಿದ್ದು ನೆರೆಯವರೂ ಸುಖವಾಗಿರಬೇಕೆಂದು ಬಯಸುವವರು ನೀವು. ಸಮಾಜಸೇವೆಯಲ್ಲಿ ಸುಖವನ್ನು ಹುಡುಕುತ್ತೀರಿ. ಯಾರ ಹಂಗೂ ಇಲ್ಲದೇ ಒಂಟಿಯಾಗಿ ಹೋರಾಡಿ ಗೆಲ್ಲುವ ಸಾಮರ್ಥ್ಯ ನಿಮಗಿದೆ. ಎಲ್ಲದರಲ್ಲಿಯೂ ಹೊಸತನವನ್ನು ಕಾಣಲು ಬಯಸುತ್ತೀರಿ. ಆಗಾಗ್ಗೆ ತೀವ್ರವಾದ ಚಿಂತನೆಯಲ್ಲಿ ಮುಳುಗಿರುತ್ತೀರಿ.ಮನಸ್ಸಾಕ್ಷಿಗೆ ವಿರುದ್ದವಾಗಿ ಎಂದಿಗೂ ನಡೆಯುವುದಿಲ್ಲ.