ಪ್ರತಿಯೊಂದು ಕಾರ್ಯ ಆರಂಭಿಸುವ ಮುನ್ನ, ಅದರ ಸಾಫಲ್ಯಕ್ಕಾಗಿ ಶುಭ ಮುಹೂರ್ತ ನೋಡುವುದು ಭಾರತೀಯ ಸಂಸ್ಕೃತಿಯಲ್ಲಿ ಬೆಳೆದು ಬಂದ ಪರಂಪರೆ. ಶಾಸ್ತ್ರಗಳಲ್ಲೂ ವಿಭಿನ್ನ ಮುಹೂರ್ತ ಸಿದ್ಧಾಂತಗಳನ್ನು ನಾವು ಕಾಣಬಹುದು. ಅವುಗಳ ಅನುಸಾರವಾಗಿ ಪಂಚಾಂಗದ ಮಾಧ್ಯಮದ ಮೂಲಕ ಲೆಕ್ಕಾಚಾರ ಮಾಡಿ ಶುಭ ಮುಹೂರ್ತದ ತಿಥಿ, ವಾರ, ನಕ್ಷತ್ರ, ಮಾಸ ಮತ್ತು ಸಮಯವನ್ನು ನಿರ್ಧರಿಸಲಾಗುತ್ತದೆ.ಆದರೆ ಕೆಲವೊಂದು ಬಾರಿ ಪರಿಸ್ಥಿತಿವಶಾತ್ ಇಲ್ಲವೇ ಬೇರಾವುದೇ ಕಾರಣಗಳಿಂದ ನಿರ್ದಿಷ್ಟ ದಿನದಂದು ಶುಭ ಮುಹೂರ್ತ ದೊರೆಯದೇ ಹೋದಲ್ಲಿ, ಆ ದಿನದ