ಅಮೆರಿಕ ರಾಷ್ಟ್ರಪತಿಯಾಗಿ ಕರಿಯ ಜನಾಂಗೀಯ ಬರಾಕ್ ಒಬಾಮ ಅವರು ಅಧಿಕಾರಕ್ಕೇರಿ ಹೊಸ ಇತಿಹಾಸ ಬರೆದಿದ್ದಾರೆ. ಅವರ ಭವಿಷ್ಯದ ಬಗ್ಗೆ ಭಾರತದ ಖ್ಯಾತ ಜ್ಯೋತಿಷಿ ಬೇಜಾನ್ ದಾರುವಾಲಾ ಅವರ ಗಣೇಶಸ್ಪೀಕ್ಸ್ ಡಾಟ್ ಕಾಂ ತಂಡವು ಏನು ಹೇಳುತ್ತದೆ ಎಂದು ತಿಳಿಯುವ ಕುತೂಹಲವೇ? ಮುಂದೆ ಓದಿ.ಅಮೆರಿಕ ರಾಷ್ಟ್ರಪತಿ ಪದವಿಗೇರಿದ ಕರಿಯ ಜನಾಂಗದ ಪ್ರಥಮ ಅಧ್ಯಕ್ಷ ಬರಾಕ್ ಒಬಾಮ ಸ್ವಚ್ಛ ರಾಜನೀತಿಯ ಒಲವುಳ್ಳವರು. ವರ್ತಮಾನ ಕಾಲದಲ್ಲಿ ಅಮೆರಿಕವು ಅಭೂತಪೂರ್ವ ಆರ್ಥಿಕ ಸಂಕಷ್ಟದಲ್ಲಿ ಕಾಲ ಕಳೆಯುತ್ತಿದೆ.