WD ಎಂಜಿಆರ್ ಪತನ, ಮನಮೋಹನ್ ಸಿಂಗ್ ಏಳಿಗೆ ಮುಂತಾಗಿ ನಿಖರವಾದ ಭವಿಷ್ಯ ನುಡಿದಿದ್ದ ಜ್ಯೋತಿಷಿಯೊಬ್ಬರು, ಫೆಬ್ರವರಿ 23ರಂದು ದೇಶದಲ್ಲಿ ಭಾರೀ ದೊಡ್ಡ ಋಣಾತ್ಮಕ ಬದಲಾವಣೆಗಳು ಘಟಿಸಲಿವೆ ಎಂದು ಎಚ್ಚರಿಸಿದ್ದಾರೆ. ಅಂದು ಮಕರ ರಾಶಿಯ ತಾರಾಪುಂಜದಲ್ಲಿ ಸೂರ್ಯ, ಮಂಗಳ, ಬುಧ, ಗುರು, ಯುರೇನಸ್ ಮತ್ತು ಚಂದ್ರ ಗ್ರಹಗಳ ಅಸಹಜವಾದ ಸಂಯೋಗದ ಪರಿಣಾಮವಾಗಿ ಭಾರತದ ರಾಜಕೀಯದಲ್ಲಿ ಕೋಲಾಹಲವಾಗಲಿದೆ, ಶೇರು ಮಾರುಕಟ್ಟೆ ಏರುಪೇರಾಗಲಿದೆ ಮತ್ತು ರಿಯಲ್ ಎಸ್ಟೇಟ್ ಬೆಲೆಗಳು ಪ್ರಪಾತಕ್ಕಿಳಿಯಲಿದೆ ಎಂದು 77ರ ಹರೆಯದ