PTI ಬುಧವಾರ (ಜು.22) ನಡೆಯಲಿರುವ ಸಂಪೂರ್ಣ ಖಗ್ರಾಸ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಜ್ಯೋತಿಷಿಗಳು ಮುಂದೆ ಕೆಟ್ಟ ಭವಿಷ್ಯ ಕಾದಿದೆ ಎಂದು ಭವಿಷ್ಯ ನುಡಿದರೆ, ಖಗೋಳವಿಜ್ಞಾನಿಗಳು ಇದೊಂದು ಕೇವಲ ವೈಜ್ಞಾನಿಕ ಘಟನೆ ಎಂದು ತಿಳಿಯಿರಿ ಎಂದು ಜನತೆಗೆ ಹೇಳಿದ್ದಾರೆ. ಹೀಗಾಗಿ ಜ್ಯೋತಿಷ್ಯ ಹಾಗೂ ಖಗೋಳ ವಿಜ್ಞಾನದ ನಡುವೆ ಜಿದ್ದಾಜಿದ್ದಿಗೆ ವೇದಿಕೆಯಾಗಿದೆ.ಖ್ಯಾತ ಜ್ಯೋತಿಷಿ ದೈವಜ್ಞ ಕೆ.ಎನ್.ಸೋಮಯಾಜಿ ಅವರು, ಮಹಾಭಾರತ ಯುದ್ಧ, ಎರಡನೇ ವಿಶ್ವಯುದ್ಧ, ಇಂದಿರಾ ಗಾಂಧಿ ಮರಣ ಎಲ್ಲವೂ ಖಗ್ರಾಸ ಸೂರ್ಯಗ್ರಹಣದ ನಂತರವೇ ನಡೆದುದು