PRಸಕಲ ಜೀವಿಗಳಿಗೆ ದೈವದತ್ತವಾದ ವರಗಳಲ್ಲಿ ನೀರು ಅತ್ಯಂತ ಶ್ರೇಷ್ಠವಾದದ್ದು. ನದಿ, ಸರೋವರಗಳು ದೇಶದ ಜೀವನಾಡಿಗಳು. ಪುರಾಣಗಳ ಪ್ರಕಾರ ತುಂದಿಲನೆಂಬ ಋಷಿ ಶಿವನನ್ನು ಕುರಿತು ತಪಸ್ಸು ಮಾಡಿ, ಶಿವನ ಅಂಶಗಳಲ್ಲಿ ಒಂದಾದ ನೀರೇ ಆಗಿ, ಪುಷ್ಕರ(ಜಲದೇವತೆ) ಎನಿಸಿಕೊಂಡರು. ಬ್ರಹ್ಮನು ಜಗತ್ತನ್ನು ಸೃಷ್ಠಿಸುವಾಗ ಈ ಪುಷ್ಕರನ ಹಾಗೂ ದೇವತೆಗಳ ಮತ್ತು ಬೃಹಸ್ಪತಿಯ(ಗುರು) ಸಹಾಯ ಪಡೆದುಕೊಂಡರು. ಬ್ರಹ್ಮ, ಪುಷ್ಕರ ಮತ್ತು ಗುರು ಈ ಮೂವರಲ್ಲಿ ಆದ ನಿಯಮಿತ ಒಪ್ಪಂದದಂತೆ, ಗುರು ಗ್ರಹವು ನಿರ್ದಿಷ್ಟವಾದ ರಾಶಿಗಳನ್ನು