ಸೋನಿಯಾ ಗಾಂಧಿ ಅವರ ಜನನ 1946 ಡಿಸೆಂಬರ್ 9ರಂದು ಇಟಲಿಯಲ್ಲಾಯಿತು. ಇವರ ಕುಂಡಲಿಯ ಅನುಸಾರ ಸೋನಿಯಾದು ವೃಶ್ಚಿಕ ಲಗ್ನ ಹಾಗೂ ವೃಷಭ ರಾಶಿ. ಲಗ್ನದ್ಲಲಿ ಸೂರ್ಯ, ಬುಧ ಹಾಗೂ ಕೇತು ವಿರಾಜಮಾನರಾಗಿದ್ದಾರೆ.
ವೃಶ್ಚಿಕ ಲಗ್ನವಾದ್ದರಿಂದ ಉನ್ನತಿಯೇ ಹೆಚ್ಚಾಗಿ ಕಾಣುತ್ತದೆ ಹಾಗೂ ನಾಯಕತ್ವ ಗಣಗಳು ಗೋಚರವಾಗುತ್ತದೆ. ಇವರು ಮಹತ್ವಾಕಾಂಕ್ಷಿ. ಸ್ವಲ್ಪ ಅಂತರ್ಮುಖಿಯಾದರೂ ಸಮಯಶೀಲ ವ್ಯಕ್ತಿತ್ವ ಇವರದು. ಶನಿ ಒಂಭತ್ತನೇ ಮನೆಯಲ್ಲಿ ಪ್ರಭಾವಶಾಲಿಯಾಗಿದ್ದಾನೆ. ಇದರಿಂದ ಸಾಹಸ ವೃದ್ಧಿ ಹೆಚ್ಚು.
ಚುನಾವಣೆಯ ದೃಷ್ಟಿಯಿಂದ ಹೇಳುವುದಾದರೆ, ಸೋನಿಯಾರಿಗೆ 2021ರವರೆಗೆ ಬುಧನ ಮಹಾದಶೆಯಿದೆ. ಶುಕ್ರ ದ್ವಿತೀಯದಲ್ಲಿದ್ದು, ವಿಶೇಷ ಲಾಭ ಗೋಚರಿಸದಿದ್ದರೂ, ಅಂತಹ ಹಾನಿಯೂ ಕಾಣಲಾರದು. ಪರಾಕ್ರಮದ ದೃಷ್ಟಿಯಲ್ಲಿ ನೋಡವುದಾದರೆ ರಾಹುವೇ ಗುರು. ಅವನು ಭಾಗ್ಯದ ಕಡೆ ನೋಡುತ್ತಿದ್ದಾನೆ. ಮೇಯ ನಂತರ ಕುಂಭಕ್ಕೆ ಅವನು ಸ್ಥಾನಪಲ್ಲಟವಾಗುವುದರಿಂದ ಪೂರ್ಣ ದೃಷ್ಟಿಯಲ್ಲಿ ಲಾಭವನ್ನು ನೋಡಲಾರಂಭಿಸುತ್ತಾನೆ. ಹೀಗಾಗಿ ಸೋನಿಯಾರ ಸ್ಥಿತಿ ಉತ್ತಮವಾಗಿದ್ದು, ಶುಭಲಾಭ ತಂದುಕೊಡುವುದರಲ್ಲಿ ಸಂದೇಹವಿಲ್ಲ. ಆದರೂ ಸೋನಿಯಾ ಗುರುವಿನ ಆರಾಧನೆ ಮಾಡುವುದು ಮುಖ್ಯ.