ಲೇಖನ | ವರ್ಷ ಭವಿಷ್ಯ | ಟ್ಯಾರೋ ಭವಿಷ್ಯ | ಜಾತಕ ಹೊಂದುತ್ತದೆಯೇ | ದಿನ ಭವಿಷ್ಯ | ವಾರ ಭವಿಷ್ಯ | ಮಾಸ ಭವಿಷ್ಯ | ತಾರಾ ಭವಿಷ್ಯ | ನಿಮ್ಮ ಜಾತಕ
ಮುಖ್ಯ ಪುಟ ಜ್ಯೋತಿಷ್ಯ » ಜ್ಯೋತಿಷ್ಯಶಾಸ್ತ್ರ » ತಾರಾ ಭವಿಷ್ಯ » ರಾಖಿ ಸಾವಂತ್‌ಗೆ 2012ರಲ್ಲಿ ವಿವಾಹ ಯೋಗ! (Rakhi Sawant | Rakhi Ka Swayamvar | Astrology | Star Prediction)
ತಾರಾ ಭವಿಷ್ಯ
Feedback Print Bookmark and Share
 
Rakhi Sawant
IFM
ಮೊನ್ನೆ ಮೊನ್ನೆ ಸ್ವಯಂವರದಲ್ಲಿ ಮದುವೆಯಾಗುತ್ತೇನೆಂದು ಸುದ್ದಿ ಮಾಡಿ ದೇಶದೆಲ್ಲೆಡೆ ಜಗಜ್ಜಾಹೀರಾಗಿ ಸುದ್ದಿ ಮಾಡಿದ ಐಟಂ ಗರ್ಲ್ , ಮಾಡೆಲ್, ಬಾಲಿವುಡ್ ನಟಿ, ಟಿವಿ ನಿರೂಪಕಿ ರಾಖಿ ಸಾವಂತ್ ಹುಟ್ಟಿದ್ದು ವೃಷ್ಚಿಕ ಲಗ್ನದ ಕನ್ಯಾ ರಾಶಿಯಲ್ಲಿ. ಲಗ್ನದಲ್ಲಿ ಬುಧ, ಸೂರ್ಯ, ಮಂಗಳರಿದ್ದಾರೆ. ಸ್ವರಾಶಿಯಲ್ಲಿ ಮಂಗಳನಿರುವುದರಿಂದ ಇಂಥವರು ತುಂಬ ಸಾಹಸಿಗಳಾಗಿರುತ್ತಾರೆ. ಸೂರ್ಯ- ಮಂಗಳ ಜತೆಯಾಗಿರುವುದರಿಂದ ತುಂಬ ಯೋಚಿಸದೆ ನೇರವಾಗಿ ಮಾತನಾಡುವವರು ಇಂಥವರಾಗಿರುತ್ತಾರೆ. ರಾಖಿಯಲ್ಲೂ ಇದೇ ಗುಣಗಳು ಕಾಣುತ್ತವೆ.

ವ್ಯಯದಲ್ಲಿ ಶುಕ್ರನಿರುವುದರಿಂದ ಯೌವನಾವಸ್ಥೆಯಲ್ಲಿ ಇಂಥವರು ಗ್ಲ್ಯಾಮರ್ ಆಸಕ್ತಿ ಹೊಂದಿರುತ್ತಾರೆ ಅಲ್ಲದೆ, ಸುಖ ಸಮೃದ್ಧಿಯ ಜೀವನ ನಡೆಸುತ್ತಾರೆ. ಪಂಚಮೇಶ ಗುರು ಉಚ್ಛನಿದ್ದು ಭಾಗ್ಯದ ಕಡೆಗೆ ದೃಷ್ಟಿಯಿದೆ. ಹಾಗಾಗಿ ಕಲಾ ಕ್ಷೇತ್ರದಲ್ಲಿ ಹಾಗೂ ಸ್ವ ಪರಾಕ್ರಮದಲ್ಲಿ ಇವರಿಗೆ ಉನ್ನತಿಯಿದೆ. ಚಂದ್ರನ ಮೇಲೆ ರಾಹು ಪ್ರಭಾವವಿರುವುದರಿಂದ ಇವರು ತಮ್ಮ ನಿಯಂತ್ರಣವನ್ನೇ ಮೀರಿ ನಡೆಯುವ ಸಂಭವ ಹೆಚ್ಚು.

ಶನಿ ದಶಮದಲ್ಲಿದ್ದಾನೆ. ಇಂಥಹ ಜಾತಕ ಹೊಂದಿರುವವರು ಮೊದಲು ಬಡತನದಲ್ಲಿ ಇದ್ದರೂ, ನಂತರ ತಂದೆತಾಯಿಯರನ್ನು ತೊರೆದ ಮೇಲೆ ಯೌವನಾವಸ್ಥೆಯಲ್ಲಿ ಉತ್ತಮ ಧನಾರ್ಜನೆ ಮಾಡುತ್ತಾರೆ. ಅಲ್ಲದೆ ಇಂಥವರಿಗೆ ಒಂದಲ್ಲ ಒಂದು ರೀತಿಯಲ್ಲಾದರೂ ತಾವು ದುಡ್ಡು ಮಾಡಬಲ್ಲೆವು ಎಂಬ ಆತ್ಮವಿಶ್ವಾಸವೂ ಇರುತ್ತದೆ. ವರ್ತಮಾನದಲ್ಲಿ ರಾಖಿಗೆ ಈಗ ರಾಹುದೆಶೆ ನಡೆಯುತ್ತಿದ್ದು ಆಗಸ್ಟ್‌ನಿಂದ ಕೇತುವಿನ ಪ್ರಭಾವವೂ ಆರಂಭವಾಗಿದೆ. ಆದರೆ ವಿವಾಹಕ್ಕೆ ಅಗತ್ಯವಾಗಿರುವ ಗುರು ಮಾತ್ರ ನೀಚ ಸ್ಥಾನದಲ್ಲಿದ್ದಾನೆ. ಹೀಗಾಗಿಯೇ ರಾಖಿ ಸ್ವಯಂವರದಲ್ಲಿ ಮದುವೆಯಾಗಲು ಹೊರಟರೂ, ಮದುವೆಯಾಗಲು ಸಾಧ್ಯವಾಗಲಿಲ್ಲ. ಕೇವಲ ನಿಶ್ಚಿತಾರ್ಥ ಮಾಡಬೇಕಾಯಿತು.

ರಾಖಿಗೆ ವಿವಾಹಯೋಗವಿರುವುದು 2012ರಿಂದ 2013ರವರೆಗೆ. ಇದಕ್ಕಿಂತ ಮೊದಲು ಆಕೆ ಯಾರಿಂದ ಪ್ರಭಾವಿತಳಾದರೂ, ಕುಂಡಲಿಯ ಪ್ರಕಾರ ವಿವಾಹವಾಗಲು ಸಾಧ್ಯವಿಲ್ಲ. ಹಾಗಾಗಿ ಈ ಸ್ವಯಂವರ ಪಬ್ಲಿಸಿಟಿ ಸ್ಟಂಟ್ ಆಗಿ ರೂಪುಗೊಂಡಿತಷ್ಟೇ ಅಲ್ಲದೆ ಬೇರೇನೂ ಸಾಧಿಸಲಾಗಲಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಾಖಿ ಸಾವಂತ್, ವಿವಾಹಯೋಗ, ಭವಿಷ್ಯ, ಜ್ಯೋತಿಷ್ಯ