ಚೀನಾ ಮೂಲದ ಫೆಂಗ್ ಶುಯಿ ವಾಸ್ತುಶಾಸ್ತ್ರಕ್ಕೆ ಐದು ಸಹಸ್ರಾಬ್ದಗಳಿಗೂ ಹಿಂದಿನ ಇತಿಹಾಸವಿದೆ. ಈ ಶಾಸ್ತ್ರವು ಗೃಹ ಸಂಬಂಧಿ ವಿಚಾರಗಳಿಗೆ ಪ್ರಾಧಾನ್ಯ ನೀಡಿದೆಯಾದರೂ ಕಲೆ ಮತ್ತು ವೈಜ್ಞಾನಿಕ ಮಹತ್ವ ಹೊಂದಿದೆ.ಫೆಂಗ್ ಶುಯಿಯು ಗಾಳಿ ಮತ್ತು ನೀರಿನ ಅಧ್ಯಯನ ನಡೆಸುವ ಶಾಸ್ತ್ರ. ಭಾರತೀಯ ವಾಸ್ತು ಶಾಸ್ತ್ರದಂತೆ ಇಲ್ಲಿಯೂ ಪಂಚಭೂತಗಳಾದ ವಾಯು, ನೀರು, ಬೆಳಕು, ಭೂಮಿ, ಆಕಾಶಗಳನ್ನು ಅಧ್ಯಯನಕ್ಕೆ ಬಳಸಲಾಗುತ್ತದೆ. ಆದರೆ ನೀರನ್ನು ಐಶ್ವರ್ಯಕ್ಕೆ ಪರ್ಯಾಯವಾಗಿ ಗಾಳಿಯನ್ನು ದಿಕ್ಕುಗಳಿಗೆ ಪರ್ಯಾಯವಾಗಿ ಪರಿಗಣಿಸಲಾಗುವುದು.ಫೆಂಗ್ ಶುಯಿ ಶುಭ