ಫೆಂಗ್ ಶುಯಿ ಶಾಸ್ತ್ರದಲ್ಲಿ ಗಾಳಿಗಂಟೆಗಳ ಶುಭಕಾರಕ ಶಕ್ತಿಯ ಕುರಿತು ಮಾಹಿತಿ ನೀಡಲಾಗಿದೆ. ಗಾಳಿ ಗಂಟೆಗಳು ಕೊಳವೆಯಾಕಾರದಲ್ಲಿದ್ದು ಅವುಗಳನ್ನು ಮನೆ ಅಥವಾ ಕಚೇರಿಯೊಳಗೆ ನಿರದಿಷ್ಟ ಜಾಗದಲ್ಲಿ ತೂಗಿಸಲಾಗುತ್ತದೆ. ಗಾಳಿಗೆ ಅವುಗಳು ಹೊರಹೊಮ್ಮಿಸುವ ಧ್ವನಿ ಉತ್ತಮ ಗುಣಾಂಶ ಹೊಂದಿರುತ್ತವೆ.ಮಣ್ಣು, ಲೋಹ ಅಥವಾ ಬಿದಿರಿನಂತಹ ಮರ ಕಟ್ಟಿಗೆಗಳಿಂದ ಅವುಗಳನ್ನು ನಿರ್ಮಿಸಲಾಗುತ್ತದೆ. ಇದು ಟೊಳ್ಳಾಗಿದ್ದು ಕೊಳವೆಯಾಕಾರದಲಿದ್ದು, ಗೊಂಚಲುಗಳಾಗಿ ಜೋಡಿಸಲಾಗಿರುತ್ತದೆ. ಈ ಗೊಂಚಲುಗಳು ಗಾಳಿಗೆ ಪರಸ್ಪರ ಸಂಘರ್ಷಿಸಿ ಪ್ರತಿಧ್ವನಿಸುತ್ತಿರುತ್ತವೆ. ಈ ಧ್ವನಿಯು ಮನೆಗೆ ಮಂಗಳವನ್ನುಂಟು ಮಾಡುತ್ತಿರುತ್ತವೆ ಎಂದು