ಫೆಂಗ್ ಶುಯಿ ಚೀನಿಯರು ನಂಬುವ ವಾಸ್ತುಶಾಸ್ತ್ರ. ಇದೀಗ ಇತರ ದೇಶಗಳಲ್ಲೂ ಜನಪ್ರಿಯವಾಗಿ ಬಳಕೆಯಾಗುತ್ತಿದೆ. ಮನೆ-ಕಚೇರಿ ಮುಂತಾದ ಆವಾಸ ಕಟ್ಟಡಗಳಲ್ಲಿ ಶುಭ ಲಾಂಚನಗಳನ್ನು ಅಳವಡಿಸಿ, ವಾತಾವರಣದಲ್ಲಿರುವ ಶುಭ ಶಕ್ತಿಗಳನ್ನು ಆಹ್ವಾನಿಸಿ, ಅಶುಭಕಾರಕಗಳನ್ನು ಹೊರಗಟ್ಟುವುದು ಈ ಆಚರಣೆಯ ಮುಖ್ಯ ಅಂಶ.ಫೆಂಗ್ ಶುಯಿ ಅಂದರೆ ನೀರು ಮತ್ತು ಗಾಳಿಯನ್ನಾಧರಿತ ವಾಸ್ತು ನಿಯಂತ್ರಣ ಕ್ರಿಯೆಗಳು. ಭಾರತೀಯವಾದ ಪಂಚಭೂತ ತತ್ವ ಇದರಲ್ಲಿ ಸರಿಹೊಂದುತ್ತದೆ. ಫೆಂಗ್ ಶುಯಿಶಾಸ್ತ್ರ ಹೇಳುವಂತೆ ಭೂ-ದೃಶ್ಯ ಶಾಲೆಗಳಿಗೆ ಮಹತ್ವ ವಿದೆ. ಇದರಲ್ಲಿ ನಾಲ್ಕು ಸ್ವರ್ಗೀಯ