ಪ್ರಕೃತಿಯಲ್ಲಿ ಐದು ಬಗೆಯ ಮೂಲಾಧಾರಗಳು, ಮೂಲತತ್ವಗಳು ಇರುತ್ತವೆ. ಅದುವೇ ಕಾಷ್ಠ, ಅಗ್ನಿ, ಪೃಥ್ವಿ, ಧಾತು ಹಾಗೂ ಜಲ. ಈ ಮೂಲಾಧಾರಗಳು ಎರಡು ಬಗೆಯಿಂದ ಪರಸ್ಪರ ಸಂಬಂಧ ಹೊಂದಿರುತ್ತವೆ. ಅರ್ಥಾತ್ ಎರಡು ಬಗೆಯ ಕಾಲಚಕ್ರಗಳನ್ನು ಈ ಮೂಲತತ್ವಗಳು ಹೊಂದಿರುತ್ತವೆ. ಒಂದು ಉತ್ಪಾದಕ ಚಕ್ರ ಹಾಗೂ ಮತ್ತೊಂದು ವಿಧ್ವಂಸಕ ಚಕ್ರ. ಉತ್ಪಾದಕ ಚಕ್ರ ಹೇಗಿರುತ್ತದೆ ಎಂದರೆ, ಕಾಷ್ಠ-ಅಗ್ನಿ-ಪೃಥ್ವಿ-ಧಾತು-ಜಲ ಈ ಕ್ರಮದಲ್ಲಿರುತ್ತದೆ. ಅಂದರೆ ಕಾಷ್ಠದಿಂದ ಅಗ್ನಿ ಉತ್ಪತ್ತಿಯಾಗುತ್ತದೆ. ಕಟ್ಟಿಗೆ ಸುಟ್ಟಾಗ ಬೆಂಕಿ ಬರುತ್ತದೆ ಎಂಬುದು