ಮನೆಯು ಯಾವ ದಿಕ್ಕಿಗೆ ಮುಖಮಾಡಿದೆಯೋ ಅದೇ ದಿಕ್ಕಿಗೆ ಮುಖ್ಯದ್ವಾರ ನಿರ್ಮಿಸುವುದು ಒಳ್ಳೆಯದು.ಬಾಗಿಲಿನ ಮುಂಭಾಗದಲ್ಲಿ ಜಗಲಿ ಇದ್ದರೆ ಅತ್ಯುತ್ತಮ.ದಕ್ಷಿಣಾಭಿಮುಖವಾಗಿರುವ ಮನೆಗೆ ಮಾತ್ರ ಮುಖ್ಯದ್ವಾರವು ದಕ್ಷಿಣ ಭಾಗಕ್ಕಿರಬಾರದು.ಪೂರ್ವ ಅಥವಾ ಪಶ್ಚಿಮ ಭಾಗಕ್ಕೆ ಅಭಿಮುಖವಾಗಿ ಮುಖ್ಯದ್ವಾರ ನಿರ್ಮಿಸಬಹುದು.ಸಾಗುವಾನಿ,ಬೀಟಿ,ಮಹಾಗನಿ,ಹಲಸು ಮೊದಲಾದ ಉತ್ತಮವಾದ ಮರದಿಂದ ನಿರ್ಮಿಸಿದ ಬಾಗಿಲುಗಳನ್ನು ಉಪಯೋಗಿಸುವುದರಿಂದ ದೀರ್ಘ ಬಾಳ್ವಿಕೆ ಬರುವುದು.ಬಾಗಿಲುಗಳನ್ನು ನಿರ್ಮಿಸುವಾಗ ಒಂದೇ ಮರದ ಹಲಗೆಯಾದರೆ ಉತ್ತಮ.ವಿವಿಧ ಬಗೆಯ ಮರಗಳಿಂದ ಕೂಡಿದ ಬಾಗಿಲುಗಳನ್ನು ನಿರ್ಮಿಸಲೇ ಬಾರದು ಯಾಕೆಂದರೆ ವಿವಿಧ ಕಾಲಾವಸ್ಥೆಗೆ ಅನುಸಾರವಾಗಿ ಕೆಲವೊಂದು ಮರಗಳು