ರಶ್ಮಿ ಪೈ ಫೆಂಗ್ಶುಯಿ ಶಾಸ್ತ್ರದ ಪ್ರಕಾರ ಮನೆಯೊಳಗೆ ನಾವಿರಿಸುವಂತಹ ಚಿತ್ರಗಳು ಅಥವಾ ವರ್ಣಚಿತ್ರಗಳು ಅಲ್ಲಿ ವಾಸಿಸುವವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಮನಸ್ಸಿಗೆ ಮುದ ನೀಡುವಂತಹ ಚಿತ್ರಗಳನ್ನು ಭಿತ್ತಿಯಲ್ಲಿ ತೂಗುಹಾಕುವುದರಿಂದ ಮನೆಯೊಳಗೆ ಧನಾತ್ಮಕ ಚೈತನ್ಯವು ಮೂಡಿ ಬರುವುದು ಎಂದು ಶಾಸ್ತ್ರವು ಹೇಳುತ್ತದೆ. ಮಲಗುವ ಕೋಣೆಯಲ್ಲಿ ಉತ್ತಮವಾದ ಚಿತ್ರಗಳು ಅಂದರೆ ನಗುವ ಮಗು, ಹೂವಿನ ಚಿತ್ರಗಳನ್ನಿರಿಸುವುದರಿಂದ ಮನಸ್ಸಿಗೆ ಹಿತಕರವಾಗಿದ್ದು ಚೆನ್ನಾಗಿ ನಿದ್ದೆಮಾಡಲು ಸಹಕಾರಿಯಾಗಿದೆ. ಫೆಂಗ್ಶುಯಿ ಪ್ರಕಾರ ಕೋಣೆಯೊಳಗಿರುವ ಚಿತ್ರಗಳು ನಮ್ಮ ಜೀವನದ