ಮನೆಯ ಕೋಣೆಗಳ ಬಗ್ಗೆ ಉಲ್ಲೇಖಿಸುವಾಗ ಭೋಜನ ಕೋಣೆಯ ಬಗ್ಗೆಯೂ ಗಮನ ಹರಿಸಬೇಕಾದುದು ಮುಖ್ಯ. ಯಾಕೆಂದರೆ ನಾವು ಸೇವಿಸುವ ಆಹಾರ ಎಷ್ಟೇ ಉತ್ತಮವಾಗಿದ್ದರೂ ಅದನ್ನು ಸೇವಿಸುವ ಸ್ಥಳ ಅಥವಾ ಪರಿಸರವು ಉತ್ತಮ ಮತ್ತು ಆರಾಮದಾಯಕವಾಗಿದ್ದರೆ ಮಾತ್ರ ಆಹಾರವು ಸರಿಯಾಗಿ ಪಚನಗೊಳ್ಳುವುದು. ಸೂಕ್ತ ಸ್ಥಳದಲ್ಲಿ ಆಹಾರ ಸೇವಿಸುವುದರಿಂದ ದೇಹಕ್ಕೆ ಆರೋಗ್ಯವೂ ಮನಸ್ಸಿಗೆ ಹಿತವೂ ಲಭಿಸುತ್ತದೆ. ಮನೆಯಲ್ಲಿ ಆಹಾರ ಸೇವನೆಗಾಗಿ ಭೋಜನೆ ಕೋಣೆ ಇರುವುದು ಸಾಮಾನ್ಯ. ಅಲ್ಲಿರುವ ವಸ್ತುಗಳನ್ನು ಚೊಕ್ಕವಾಗಿ ಇಟ್ಟರೆ ಮಾತ್ರ ಅಲ್ಲಿ