100ನೇ ಶತಕ ಕೇವಲ ಅಂಕಿ ಮಾತ್ರ: ಇದು ಮಾಸ್ಟರ್ ನುಡಿ..!

ನವದೆಹಲಿ, ಶುಕ್ರವಾರ, 18 ನವೆಂಬರ್ 2011 (18:21 IST)

ಸಚಿನ್‌ ತೆಂಡುಲ್ಕರ್‌
ಕಳೆದ ಮಾರ್ಚ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಾಗಪುರದಲ್ಲಿ ನಡೆದ ವಿಶ್ವಕಪ್‌‌ ಪಂದ್ಯದಲ್ಲಿ 99 ಶತಕಗಳನ್ನು ಪೂರೈಸಿರುವ ಸಚಿನ್‌ ತದಾ ನಂತರ ನಾಲ್ಕು ಏಕದಿನ ಪಂದ್ಯಗಳು ಹಾಗೂ ಆರು ಟೆಸ್ಟ್‌ಗಳನ್ನು ಆಡಿದ್ದರೂ ತಮ್ಮ ನೂರನೇ ಶತಕವನ್ನು ಪೂರೈಸುವಲ್ಲಿ ವಿಫಲರಾಗಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ನೂರನೇ ಶತಕ ಪೂರೈಸುವತ್ತ ದಾಪುಗಾಲಿಟ್ಟಿದ್ದ ಸಚಿನ್‌ ಮೂರು ಬಾರಿ ಶತಕ ಸಮೀಪಿಸುತ್ತಿದ್ದಂತೆ ಔಟ್‌ ಆಗಿದ್ದರು. ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ವಿರುದ್ಧ 85 ರನ್‌ ಗಳಿಸಿ ಔಟ್‌ ಆಗಿದ್ದ ಸಚಿನ್‌ ಇಂಗ್ಲೆಂಡ್‌ ವಿರುದ್ಧ ನಡೆದ ಓವೆಲ್‌ ಟೆಸ್ಟ್‌ನಲ್ಲಿ 91ಗಳಿಸಿದ್ದರು. ವೆಸ್ಟ್‌ಇಂಡೀಸ್ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ 76ರನ್‌ ಗಳಿಸಿದ್ದರು.

ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟು 22 ವರ್ಷ ಪೂರೈಸಿರುವುದರಿಂದ ಉದ್ವೇಗಗೊಂಡಿದ್ದೇನೆ ಎಂದು ಲಿಟ್ಲ್ ಮಾಸ್ಟರ್ ತಿಳಿಸಿದ್ದಾರೆ. 1989ರ ನವೆಂಬರ್ 15ರಂದು ಪಾಕಿಸ್ತಾನದ ಕರಾಚಿಯಲ್ಲಿ ನಡೆದ ಟೆಸ್ಟ್‌ನಲ್ಲಿ ಆಡುವ ಮೂಲಕ ಸಚಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.

ನಾನು 22 ವರ್ಷ ಕ್ರಿಕೆಟ್‌ ರಂ‌ಗದಲ್ಲಿ ಸೇವೆ ಸಲ್ಲಿಸಿರುವ ಬಗ್ಗೆ ನನಗೆ ಅದ್ಭುತವಾದ ಅನುಭವವಾಗಿದೆ. ಎರಡು ದಶಕಗಳ ಕಾಲ ದೇಶಕ್ಕಾಗಿ ಆಡಿರುವ ಬಗ್ಗೆ ನನಗೆ ಸಂತೃಪ್ತಿಯಿದೆ ಎಂದು ಸಚಿನ್‌ ಅಭಿಪ್ರಾಯಪಟ್ಟಿದ್ದಾರೆ.

ಸಚಿನ್‌ ತೆಂಡುಲ್ಕರ್‌ ಅವರು 183 ಟೆಸ್ಟ್‌ ಪಂದ್ಯದಲ್ಲಿ 51ಶತಕಗಳು ಸೇರಿದಂತೆ ಒಟ್ಟು 15,086 ರನ್‌ ಹಾಗೂ 453 ಏಕದಿನ ಪಂದ್ಯಗಳಲ್ಲಿ 48 ಶತಕಗಳು ಸೇರಿದಂತೆ 18,111ರನ್‌ ಗಳಿಸಿದ್ದಾರೆ.

ಸಚಿನ್‌ ತೆಂಡುಲ್ಕರ್‌ ಅವರು ವೆಸ್ಟ್‌ಇಂಡೀಸ್ ವಿರುದ್ಧದ ಅಂತಿಮ ಟೆಸ್ಟ್‌ ಅಥವಾ ಏಕದಿನ ಸರಣಿಯಲ್ಲಿ ತಮ್ಮ ನೂರನೇ ಶತಕ ಗಳಿಸಲು ವಿಫಲವಾದರೆ ಮುಂದಿನ ತಿಂಗಳು ಆಸ್ಟ್ರೇಲಿಯಾ ವಿರುದ್ಧ ಆರಂಭವಾಗಲಿರುವ ನಡೆಯಲಿರುವ ನಾಲ್ಕು ಟೆಸ್ಟ್ ಪಂದ್ಯಗಳ ವರೆಗೆ ಕಾಯುವುದು ಅನಿವಾರ್ಯವಾಗುತ್ತದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

ಭಾರತೀಯ ಹಾಕಿ ತಂಡ ಯೂರೋಪ್‌‌ಗೆ ತೆರಳಲು ಸಜ್ಜಾಗಿದೆ

ನವದೆಹಲಿ :ಮುಂದಿ ದಿನಗಳಲ್ಲಿ ನಡೆಯಲಿರುವ ಹಾಕಿ ವಿಶ್ವ ಕಪ್‌‌ಗಾಗಿ ಸಿದ್ದತೆ ನಡೆಸುತ್ತಿರುವ ಇಂಡಿಯನ್‌ ...

ಧೋನಿ ಹೇಳಿಕೆ ಪರಿಶೀಲಿಸಲು ಅವಕಾಶ ಕೋರಿ ಸುಪ್ರೀಂಕೋರ್ಟ್‌ಗೆ ಬಿಸಿಸಿಐ ಅರ್ಜಿ

ನವದೆಹಲಿ: ಐಪಿಎಲ್ ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ಹಗರಣದ ತನಿಖೆ ನಡೆಸುತ್ತಿರುವ ಮುದ್ಗಲ್ ಸಮಿತಿಯ ಮುಂದೆ ...

ಟೆನಿಸ್‌‌‌ ಶ್ರೇಯಾಂಕ: ಭಾರತೀಯರ ಶ್ರೇಯಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ

ನವದೆಹಲಿ : ಭಾರತದ ಡೆವಿಸ್‌‌‌‌ಕಪ್‌ನಲ್ಲಿ ಸೋಮದೇವ್ ದೇವವರ್ಮನ್ ಕೊರಿಯಾ ವಿರುದ್ದ ಗೆಲುವನ್ನು ಸಾಧಿಸುವುದರ ...

ಯುವಿಯನ್ನು ಸಮರ್ಥಿಸಿಕೊಂಡು ಸಚಿನ್ ಬ್ಯಾಟಿಂಗ್

ನವದೆಹಲಿ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಅವರನ್ನು ಸಮರ್ಥಿಸಿಕೊಂಡು ಸಚಿನ್ ತೆಂಡೂಲ್ಕರ್ ...

Widgets Magazine
Widgets Magazine