ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಜೀವನ ಕಥೆ ಇನ್ನು ಮುಂದೆ ಚಿತ್ರ ಪ್ರದರ್ಶಕದಲ್ಲಿ ಕಾಣ ಸಿಗಲಿದೆ. ಹೋಮ್ ಬಾಕ್ಸ್ ಆಫೀಸ್(ಎಚ್‌ಬಿಒ) ಖಾಸಗಿ ಚಾನೆಲ್ ಈ ಬಗ್ಗೆ ಪ್ರಕಟನೆಯಲ್ಲಿ ತಿಳಿಸಿದ್ದು, ಒಬಾಮರ ಬಾಲ್ಯ ಜೀವನದಿಂದ ಆರಂಭಿಸಿ ಶ್ವೇತ ಭವನ ಪ್ರವೇಶದ ವರೆಗಿನ ಜೀವನ ಕಥೆಯನ್ನು ಆಧಾರವಾಗಿಟ್ಟುಕೊಂಡು ಚಿತ್ರೀಕರಣ ನಡೆಸಲಾಗುವುದು ಎಂದು ಹೇಳಿದೆ. ಚಿತ್ರೀಕರಣ ಶೀಘ್ರದಲ್ಲಿಯೇ ಆರಂಭವಾಗಲಿದೆ.