ನಟ ಸೀನ್ ಪೆನ್ ಜತೆ ತನಗೆ ಪ್ರೇಮವಿದೆ ಎಂಬ ಮಾಧ್ಯಮ ವರದಿಯನ್ನು ಹಾಲಿವುಡ್ ನಟಿ ನತಾಲಿ ಪೋರ್ಟ್‌ಮ್ಯಾನ್ ತಳ್ಳಿಹಾಕಿದ್ದಾರೆ. ಇದಲ್ಲದೆ ಇಂತಹ ಸುದ್ದಿಗಳನ್ನು ಹಬ್ಬುವ ಮಿಡಿಯಾ ವಿಭಾಗದ ಮೇಲೆ ಹಾರಿಹಾಯ್ದಿದ್ದಾಳೆ. ಪೆನ್ ಒಬ್ಬ ಅತ್ಯುತ್ತಮ ನಟನಾಗಿದ್ದು, ನನಗೊಬ್ಬ ಸಹ ಕಲಾಕರನಿದ್ದಂತೆ ಎಂದು ನತಾಲಿ ಹೇಳಿಕೊಂಡಿದ್ದಾಳೆ.