ಬಾಲಿವುಡ್ ನಟಿ ಕಂಗಾನಾ ರಾಣಾವತ್ ನಟನೆಯ ಮುಂದಿನ ಹಾಸ್ಯಪ್ರಧಾನ ಚಿತ್ರ ನೋ ಪ್ರಾಬ್ಲೆಮ್. ಚಿತ್ರವನ್ನು ಬಾಲಿವುಡ್‌ನ ಜನಪ್ರಿಯ ನಟ ಅನಿಲ್ ಕಪೂರ್ ನಿರ್ಮಿಸಲಿದ್ದು, ಅನೀಸ್ ಬಜ್ಮಿ ನಿರ್ದೇಶನಗೈದಿದ್ದಾರೆ. ಬಾಲಿವುಡ್ ಸುಂದರಿ ಸುಶ್ಮಿತಾ ಸೇನ್ ಕಂಗಾನಾಳ ಸಹೋದರಿ ಪಾತ್ರದಲ್ಲಿದ್ದಾಳೆ.ಚಿತ್ರದಲ್ಲಿನ ಪಾತ್ರದ ಬಗ್ಗೆ ಅತೀವ ಸಂತೋಷ ವ್ಯಕ್ತಪಡಿಸಿದ ನಟಿ ಕಂಗಾನಾ ಚಿತ್ರದಲ್ಲಿ ಹಾಸ್ಯಪಾತ್ರ ನೀಡಿದುದಕ್ಕಾಗಿ ನಿರ್ಮಾಪಕ ಅನಿಲ್ ಕಪೂರ್‌ರಿಗೆ ಕೃತಜ್ಞತೆ ಸಲ್ಲಿಸಿದ್ದಾಳೆ. ಗ್ಯಾಂಗ್‌ಸ್ಟಾರ್, ಫ್ಯಾಶನ್, ರಾಝ್ ಚಿತ್ರಗಳಲ್ಲಿ ನಟಿಸಿದ ಕಂಗಾನಾಳಿಗೆ ಇದುವರೆಗಿನ ಸಿನೆಮಾ