ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಂದರ್ಶನ » ದಿಲೀಪ್‌ಗಾಗಿ ಹಾಡಬೇಕಿತ್ತು: ಗಾನ ಕೋಗಿಲೆ (Lata Mangeshkar in her own voice)
ಸಂದರ್ಶನ
Feedback Print Bookmark and Share
 
ಕಳೆದು ಆರು ದಶಕಗಳಿಂದ ಬಾಲಿವುಡ್‌ನ ಬಹುತೇಕ ನಟಿಯರಿಗಾಗಿ ಹಿನ್ನಲೆ ಗಾಯನವನ್ನು ಹಾಡಿದ 'ಗಾನ ಕೋಗಿಲೆ' ಲತಾ ಮಂಜೇಷ್ಕರ್ 'ಟ್ರಾಜಡಿ ಕಿಂಗ್' ಖ್ಯಾತಿಯ ನಟ ದಿಲೀಪ್ ಕುಮಾರ್‍‌ಗಾಗಿ ಹಾಡಲು ಸಾಧ್ಯವಾಗದೇ ಹೋದುದಕ್ಕಾಗಿ ವಿಷಾದ ವ್ಯಕ್ತಪಡಿಸಿದ್ದಾರೆ. ಒಬ್ಬ ಕಲಾವಿದನಾಗಿ ದಿಲೀಪ್‌ರೊಂದಿಗಿನ ಲತಾರ ನಂಟು ಉತ್ತಮವಾಗಿದ್ದು, ಪರಸ್ಪರ ಅಗಾಧ ಗೌರವವಿದೆ.

ಮುಂಬೈನಲ್ಲಿ ಶುಕ್ರವಾರ ಬಿಡುಗಡೆಗೊಂಡ ಲೇಖಕಿ ನಸ್ರೀನ್ ಮುನ್ನಿ ಕಬೀರ್ ಬರೆದಿರುವ 'ಲತಾ ಮಂಗೇಷ್ಕರ್ ಇನ್ ಹರ್ ವೋನ್ ವಾಯ್ಸ್' ಪುಸ್ತಕದಲ್ಲಿ ಗಾಯಕಿ ತಮ್ಮ ಆತ್ಮದಾಳವನ್ನು ವ್ಯಕ್ತಪಡಿಸಿದ್ದಾರೆ.

'ಲತಾ ಮಂಗೇಷ್ಕರ್ ಇನ್ ಹರ್ ವೋನ್ ವಾಯ್ಸ್' ಪುಸ್ತಕದಲ್ಲಿನ ಸಂಭಾಷಣೆಯು ಪ್ರಶ್ನೋತ್ತರ ರೂಪದಲ್ಲಿ ಸಾಗುತ್ತಿದ್ದು, ಇದರಲ್ಲಿ ಲತಾ ಮತ್ತು ಕಬೀರ್ ಪರಸ್ಪರ ಪ್ರತಿಕ್ರಿಯಿಸಿದ್ದಾರೆ. ಇನ್ನೊಂದು ವೇಳೆ ಅವಸರ ಸಿಕ್ಕಿದರೆ ಖಂಡಿತವಾಗಿಯೂ ದಿಲೀಪ್‌ಗಾಗಿ ಸಂತೋಷದಿಂದ ಹಾಡುತ್ತಿದ್ದೆ ಎಂದು ಲತಾ ತಮ್ಮ ಮಧುರ ಭಾವನೆಯನ್ನು ಈ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದಿಲೀಪ್ ಕುಮಾರ್, ಲತಾ ಮಂಜೇಷ್ಕರ್, ಗಾನ ಕೋಗಿಲೆ