ಸಿಂಗ್ ಈಸ್ ಕಿಂಗ್ ಸಹಿತ ಹಲವು ಹಿಟ್ ಸಿನೆಮಾಗಳನ್ನು ನೀಡಿದ ಬಾಲಿವುಡ್ ನಟ ಅಕ್ಷಯ್ ಕುಮಾರ್‌ಗೆ 2009ನೇ ಸಾಲಿನ ಇದುವರೆಗಿನ ದಿನಗಳು ಅಷ್ಟು ಸುಖಕರವಾಗಿ ಪರಿಣಮಿಸಿಲ್ಲ. ಪ್ರಸಕ್ತ ವರ್ಷ ಹಲವು ವಿವಾದಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಅಕ್ಷಯ್‌ರ ಚಾಂದ್‌ನಿ ಚೌಕ್ ಟು ಚೀನಾ ಹಾಗೂ 8 ಇನ್ ಟು 10 ತಸ್ವೀರ್ ಚಿತ್ರಗಳು ಫ್ಲಾಫ್ ಆದವು. ಆದರೂ ಜುಲೈ 10 ತೆರೆಕಾಣಲಿರುವ ಕಂಬಾಕ್ತ್ ಇಶ್ಕ್ ಮೂಲಕ ಬಾಲಿವುಡ್‌ನಲ್ಲಿ ಮತ್ತೆ ಛಾಪು ಮೂಡಿಸುವ ವಿಶ್ವಾಸದಲ್ಲಿದ್ದಾರೆ