PTI ಬಿಗ್ ಬ್ರದರ್ ರಿಯಾಲಿಟಿ ಶೋದಲ್ಲಿ ಅಂತಾರಾಷ್ಟ್ರೀಯವಾಗಿ ಪ್ರಖ್ಯಾತಿ ಗಳಿಸಿರುವ ಕರ್ನಾಟಕದ ತರಳೆ ಶಿಲ್ಪಾ ಶೆಟ್ಟಿ ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡತೊಡಗಿದ್ದಾರೆ.ಲಂಡನ್‌ನಲ್ಲಿ ತನ್ನ ಪರಿಮಳದ್ರವ್ಯವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಬಳಿಕ, ಜರ್ಮನಿಯಲ್ಲಿ ತನ್ನ ಬ್ರಾಡ್‌ವೇ ಸಂಗೀತ-ನೃತ್ಯ ಪ್ರದರ್ಶನ ಮಿಸ್ ಬಾಲಿವುಡ್ನ ಪ್ರೀಮಿಯರ್ ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದಾರೆ.ನಟಿಯು ಈಗ ಮಿಸ್ ಬಾಲಿವುಡ್ಗೆ ಅಂತಿಮ ಸ್ಪರ್ಶ ನೀಡುತ್ತಿದ್ದು, ಇದು ಲಾಯ್ಡ್ ವೆಬರ್ ಅವರ ಬಾಂಬೇ ಡ್ರೀಮ್ಸ್ ಮಾದರಿಯಲ್ಲಿರುತ್ತದೆ.ಬ್ರಿಟಿಷ್ ಆಡಳಿತದಿಂದ ಭಾರತಕ್ಕೆ ಸ್ವಾತಂತ್ರ್ಯ ದೊರೆತ