ಮುಖ್ಯ ಪುಟ > ಮನರಂಜನೆ > ಬಾಲಿವುಡ್‌ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಣಿ ಇಷ್ಟಪಡುವ ಇನ್ನೋರ್ವನಾರು?  Search similar articles
IFM
ಬೆಕ್ಕಿನ ಕಣ್ಣಿನ, ಗರಗಸ ಕಂಠದ ಬಾಲಿವುಡ್ ಸುಂದರಿ ರಾಣಿಮುಖರ್ಜಿ ಮತ್ತು ಆದಿತ್ಯ ಚೋಪ್ರ ಫ್ರೆಂಡ್ಸ್ ಅಂತ ಎಲ್ಲರಿಗೂ ಗೊತ್ತಿರೋ ವಿಚಾರ. ಆದರೆ ರಾಣಿ ಬೇಬ್‌ಗೆ ಇನ್ನೂ ಒಬ್ಬನೆಂದರೆ ಇಷ್ಟವಂತೆ.

ಆಕೆ ಇಷ್ಟಪಡುವ ಟಾಪ್ ಲೀಸ್ಟ್‌ನಲ್ಲಿ ಇನ್ನೂ ಒಬ್ಬ ಗಂಡಸು ಇದ್ದಾನೆ ಅಂತ ರಾಣಿ ಹೇಳಿಕೊಂಡಿದ್ದಾರೆ. ಆದರೆ ಅಷ್ಟರಲ್ಲೇ ಏನೇನೋ ಊಹಿಸಬೇಕಿಲ್ಲ. ಇದು ವೃತ್ತಿಪರತೆಯ ಇಷ್ಟ ಅಷ್ಟೇಯ. ಹನ್ನೆರಡು ವರ್ಷಗಳಿಂದ ಬಾಲಿವುಡ್‌ನಲ್ಲಿ ನಟಿಸುತ್ತಿರುವ ರಾಣಿ ಇದುವರೆಗೆ 40 ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅದು ಶಾರೂಖ್ ಖಾನ್ ಅಲ್ಲದಿದ್ದರೆ ಎಲ್ಲವೂ ಇಷ್ಟು ಸರಳವಾಗುತ್ತಿರಲಿಲ್ಲ ಎಂಬು ರಾಣಿಯ ಮನದಾಳದ ಮಾತು.

ರಾಣಿಯ ಆರಂಗೇಟ್ರಂ ಕುಚ್ ಕುಚ್ ಹೋತಾ ಹೈ ಸಿನಿಮಾದ ಮೂಲಕ ಆಗಿತ್ತು. ಎಲ್ಲರೂ ರಾಣಿಯನ್ನು ಹೊಸಬಳು ಎಂದು ನೋಡುತ್ತಿದ್ದರೆ, ಶಾರೂಖ್ ಮಾತ್ರ ರಾಣಿಗೆ ಏನೂ ಮುಜಗರ ಆಗದಂತೆ ನೋಡಿಕೊಂಡರಂತೆ. ಒಬ್ಬ ಸೂಪರ್ ಸ್ಟಾರ್ ಆಗಿದ್ದರೂ, ಅವರ ಈ ರೀತಿಯ ವರ್ತನೆಯಿಂದ ರಾಣಿ ಆನಂದ ತುಂದಿಲರಾಗಿದ್ದರು. ವೃತ್ತಿಕುರಿತ ಅರ್ಪಣಾ ಮನೋಭಾವ ಮತ್ತು ಕೆಲಸದ ಕುರಿತ ಅವರ ಪರಿಶ್ರಮವನ್ನು ಗೌರವಿಸುತ್ತೇನೆ, ನಾನಿನ್ನೂ ಅವರಿಂದ ತುಂಬ ಕಲಿಯುತ್ತಿದ್ದೇನೆ ಎಂದು ಮನಪೂರ್ವಕ ಹೇಳಿಕೊಂಡಿದ್ದಾರೆ ಈ ಕೃಷ್ಣ ಸುಂದರಿ.

ಆದರೆ, ನಿಮ್ಮ ವಿವಾಹ ಯೋಜನೆಗಳೇನು ಎಂದು ಕೇಳಿದರೆ, ಸದ್ಯಕ್ಕೆ ಮದುವೆಯ ಮಾತೇ ಇಲ್ಲ. ನಾನು ಇನ್ನಷ್ಟು ಸಿನಿಮಾಗಳಲ್ಲಿ ನಟಿಸಬೇಕಿರುವುದರಿಂದ ಸದ್ಯೋಭವಿಷ್ಯದಲ್ಲಿ ಮದುವೆಯ ಬಗ್ಗೆ ಯೋಚಿಸುವುದೇ ಇಲ್ಲ ಅಂತಾರೆ ರಾಣಿಮುಖರ್ಜಿ
ಮತ್ತಷ್ಟು
ಆಂತರ್ಯದ ದನಿಗೆ ಓಗೊಡುವ ಸಲ್ಮಾನ್!
ನೀತುಳ ಮುತ್ತಿನ ಮತ್ತು ಅಭಯ್‌ಗೆ ಲಕ್ಕೋಲಕ್ಕು!
ರಾಜೀವ್ ರೋಮ್ಯಾನ್ಸ್: ಬಾಲಿವುಡ್ ಚಿತ್ರಕ್ಕೆ ಸೋನಿಯಾ ಓಕೆ
ಅಮೀರ್ ಖಾನ್, ಶಾರೂಖ್ ಮತ್ತೊಂದು ನಾಯಿ!
'ಚಕ್ ದೇ' ಹುಡುಗಿ ಹಾಕಿ ಡಿಪ್ಲೊಮಾ ಪರೀಕ್ಷೆಯಲ್ಲಿ ಫೇಲ್!
ಯೇ ದೋಸ್ತಿ ಹಮ್ ನಹೀ ತೋಡೆಂಗೆ