ಮುಖ್ಯ ಪುಟ > ಮನರಂಜನೆ > ಬಾಲಿವುಡ್‌ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದುಬೈ : ಸ್ಯಾಂಕ್ಚುರಿ ಫಾಲ್ಸ್‌ ನಿವಾಸಿಗಳಾಗಿ ಐಶ್-ಅಭಿ  Search similar articles
IFM
ದುಬೈನ ಪ್ರತಿಷ್ಠಿತ ಪ್ರದೇಶವಾದ ಸ್ಯಾಂಕ್ಚುರಿ ಫಾಲ್ಸ್‌‌ನಲ್ಲಿ ಬಾಲಿವುಡ್ ದಂಪತಿಗಳಾದ ಐಶ್ವರ್ಯ ಹಾಗೂ ಅಭೀಷೇಕ್ ಮನೆಯನ್ನು ಖರೀದಿಸಿದ್ದಾರೆ ಎಂದು ಬಾಲಿವುಡ್ ಮೂಲಗಳು ವರದಿ ಮಾಡಿವೆ.

ಹೆಸರಾಂತ ಡೇವಿಡ್ ಮತ್ತು ವಿಕ್ಟೋರಿಯಾ ದಂಪತಿಗಳು, ಆಂಜಲೀನಾ ಜ್ಯೂಲಿ ಮತ್ತು ಬ್ರ್ಯಾಡ್ ಪಿಟ್ ಅವರುಗಳು ಖರೀದಿಸಿದ ಪ್ರದೇಶವಾದ ಸ್ಯಾಂಕ್ಚುರಿ ಫಾಲ್ಸ್‌ನಲ್ಲಿ ಐಶ್ -ಅಭಿ ಸುಮಾರು 10ದಶಲಕ್ಷ ಡಾಲರ್ ನೀಡಿ ಮನೆಯನ್ನು ಖರೀದಿಸಿದ್ದಾರಂತೆ.

ಸ್ಯಾಂಕ್ಚುರಿ ಫಾಲ್ಸ್‌‌ನ ನಿವಾಸಿಗಳು ಬುರ್ಜ್ -ಅಲ್-ಅರಬ್ ಸೆವನ್ ಸ್ಟಾರ್ ಹೋಟೆಲ್‌ನಲ್ಲಿ ಐಶ್-ಅಭಿ ದಂಪತಿಗಳಿಗಾಗಿ ಆತಿಥ್ಯ ನೀಡಲು ಪಾರ್ಟಿಯನ್ನು ಆಯೋಜಿಸಿದ್ದು ನೈಸರ್ಗಿಕ ಪ್ರಕೃತಿ ಸೌಂದರ್ಯ, ಸರೋವರಗಳು ಹೊಂದಿರುವ ವಿಲ್ಲಾದ ಭಾವಿ ನೆರೆಮನೆಯವರು ಎಂದು ಇತರರಿಗೆ ಪರಿಚಯಿಸಿಲಾಯಿತು.

"ದುಬೈ ನನಗೆ ವಿಶೇಷ ಸ್ಥಳವಾಗಿದೆ. 2006ರಲ್ಲಿ ಐಐಎಫ್‌ಎ ಪ್ರಶಸ್ತಿ ಪ್ರದಾನ ಸಮಾರಂಭದ ಪ್ರೋವೊಕ್ಡ್ ಚಿತ್ರದ ಪ್ರೀಮಿಯರ್‌ನಲ್ಲಿ ಅಮಿತಾಭ್ ಬಚ್ಚನ್ ಅವರ ಉಪಸ್ಥಿತಿ ನನಗೆ ಅತೀವ ಸಂತಸ ತಂದಿತ್ತು. ನನ್ನ ಜೀವನದ ವಿಶೇಷ ಕ್ಷಣಗಳನ್ನು ನಾನು ಇಲ್ಲಿ ಕಳೆಯಬೇಕು ಎನ್ನುವುದೇ ನನ್ನ ಆಸೆಯಾಗಿದೆ" ಎಂದು ಐಶ್ವರ್ಯಾ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಮತ್ತಷ್ಟು
ಮೈ ಔರ್ ಮಿಸ್ಟ್ರೆಸ್ ಖನ್ನಾ
ಹಾಟ್‌ ಇಮೇಜ್‌ಗಾಗಿ ಶ್ರೇಯಾ,ಆಸಿನ್ ಸ್ಪರ್ಧೆ
ಶಾರುಕ್ ಕಚೇರಿಗೆ 56 ಕೋಟಿ ವೆಚ್ಚ
ತಿರುಪತಿಗೆ ನಟಿ ಶಿಲ್ಪಾ ಶೆಟ್ಟಿ ಭೇಟಿ
ಪರಿಸರ ಸಂರಕ್ಷಣೆಯತ್ತ ವಿದ್ಯಾಬಾಲನ್
ಕಿಡ್‌ನ್ಯಾಪ್‌ ಡಬ್ಬಿಂಗ್ ಮುಗಿಸಿದ ಸಂಜಯ್ ದತ್ತ್