ಮುಖ್ಯ ಪುಟ > ಮನರಂಜನೆ > ಬಾಲಿವುಡ್‌ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿನಿಮಾ ಬಗ್ಗೆ ನಿರ್ಲಕ್ಷ್ಯವಿಲ್ಲ : ಪ್ರೀತಿ  Search similar articles
PTI
ಐಪಿಎಲ್ ಪಂದ್ಯಾವಳಿ ಮರೆಯಲಾಗದ ಅನುಭವ ನೀಡಿದ್ದರೂ ಕೂಡ ನನ್ನ ಸಿನಿಮಾ ಜೀವನ ಎಂದಿನಂತೆ ಮುಂದುವರಿಯಲಿದೆ ಎಂದು ಬಾಲಿವುಡ್ ನಟಿ, ಮೋಹಾಲಿ ಐಪಿಎಲ್ ತಂಡದ ಒಡತಿ ಪ್ರೀತಿ ಝಿಂಟಾ ತಿಳಿಸಿದ್ದಾರೆ.

"ಒಂದರ ಹಿಂದೊಂದರಂತೆ ನನ್ನ ನಾಲ್ಕು ಸಿನಿಮಾಗಳು ಈ ವರ್ಷ ಬಿಡುಗಡೆಯಾಗಲಿವೆ. ಸದ್ಯಕ್ಕೆ ಜಹನು ಬರುವ ಅವರ 'ಹರ್ ಪಲ್'ಗೆ ಡಬ್ಬಿಂಗ್ ಮಾಡುತ್ತಿದ್ದು 'ಮೈ ಔರ್ ಮಿಸಸ್ ಖನ್ನಾ'ದ ಚಿತ್ರಿಕರಣದಲ್ಲಿ ಭಾಗವಹಿಸುತ್ತಿದ್ದೇನೆ" ಎಂದವರು ಹೇಳಿದ್ದಾರೆ.

ತಮ್ಮ ಕೈಯಲ್ಲಿರುವ ಸಿನಿಮಾಗಳ ಬಗೆಗಿನ ಹೆಚ್ಚಿನ ಮಾಹಿತಿ ಅವರು ನೀಡದಿದ್ದರೂ, ಈ ಸಿನಿಮಾಗಳಲ್ಲಿ ಉತ್ತಮ ಪಾತ್ರಗಳಿದ್ದು, ತಮ್ಮ ವೃತ್ತಿ ಬದುಕಿನ ದಿಕ್ಕನ್ನು ಬದಲಿಸುವಲ್ಲಿ ಯಶಸ್ವಿಯಾಗುತ್ತದೆ ಎಂಬ ನಂಬಿಕೆ ತನಗಿದೆ ಎಂದರು.

ಧರ್ಮೇಂದ್ರ ಮತ್ತು ಶೈನಿ ಆಹುಜಾರೊಂದಿಗೆ ಪ್ರೀತಿ ನಟಿಸುತ್ತಿರುವ 'ಹರ್ ಪಲ್' ಭಾವನಾತ್ಮಕ ಸಿನಿಮಾವಾಗಿದ್ದು ನೈಜ ಚಿತ್ರಕಥೆಯನ್ನಾಧರಿಸಿದೆ. ಇದಲ್ಲದೆ ಅವರು, ಅಮಿತಾಭ್, ಅರ್ಜುನ್ ರಾಂಪಾಲ್, ಶಿಫಾಲಿ ಶಾರೊಂದಿಗೆ ಅಭಿನಯಿಸುತ್ತಿರುವ 'ದ ಲಾಸ್ಟ್ ಲಿಯರ್'ನಲ್ಲಿ ಉದಯೋನ್ಮಖ ನಟಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ದೀಪಾ ಮೆಹ್ತಾರ 'ಹೆವೆನ್ ಆನ್ ಅರ್ತ್'ನಲ್ಲಿ ಶೋಷಿತ ಗೃಹಿಣಿಯಾಗಿ ಪಾತ್ರದಲ್ಲಿ ನಟಿಸಲಿದ್ದಾರೆ. 'ಹಿರೋಸ್'ನಲ್ಲಿ ಪ್ರೀತಿ, ಸಲ್ಮಾನ್ ಖಾನ್, ಸನ್ನಿ ಡಿಯೋಲ್, ಬಾಬ್ಬಿ ಡಿಯೋಲ್‌ರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

ತಾನು ನಟಿಸಿದ ಸಿನಿಮಾಗಳಲ್ಲಿ ಸಂತೃಪ್ತಿಯನ್ನು ಹೊಂದಿರುವುದಾಗಿ ಹೇಳುವ ಗುಳಿಕೆನ್ನೆಗಳ ಚೆಲುವೆ, ಸಿನಿಮಾಗಳಲ್ಲಿ ತಾನೆಂದಿಗೂ ಗ್ಲಾಮರಸ್ ಇಮೇಜ್ ಹೊಂದಿರಲಿಲ್ಲ ಎಂದು ಹೇಳಿದ್ದಾರೆ.
ಮತ್ತಷ್ಟು
ಸಾವರಿಯಾದ ಪೋರನಿಗೆ 7 ಕೋಟಿ !?
ಮರಾಠಿ ಚಿತ್ರ ನಿರ್ಮಾಣಕ್ಕಿಳಿದ ಬಿಗ್ ಬಿ
ಸಸ್ಯಾಹಾರಿ ಸೆಕ್ಸೀ ಅಮಿತಾಭ್!
ದಶಾವತಾರಂ: ಪ್ರೇಕ್ಷಕ ಥಮ್ಸ್ಅಫ್
ಕತ್ರಿನಾ ಕೈಫ್ 'ಅತ್ಯಂತ ಸೆಕ್ಸೀ ಮಹಿಳೆ'
ಐಐಎಫ್ಎ: ದೀಪಿಕಾ, ರಣಬೀರ್‌ಗೆ ಪ್ರಶಸ್ತಿ