ಮುಖ್ಯ ಪುಟ > ಮನರಂಜನೆ > ಬಾಲಿವುಡ್‌ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆದಿತ್ಯನ ಚಿತ್ತವೂ ಬಾಲಿವುಡ್‌ನತ್ತ.......!  Search similar articles
ಹೆಸರಾಂತ ಹಿನ್ನೆಲೆ ಗಾಯಕ ಉದಿತ್ ನಾರಯಣ್‌ರ ಪುತ್ರ ಅದಿತ್ಯ ನಾರಾಯಣ್ ಚಿತ್ರರಂಗದಲ್ಲಿ ಮಿಂಚಬೇಕೆಂಬ ಕನಸ ಕಾಣ ಹತ್ತಿದ್ದಾರೆ.

ಇವರು ಝಿ ಟಿವಿಯ 'ಸ ರೆ ಗ ಮ ಪ ಚಾಲೇಂಜ್'ನ ನಿರೂಪಕನಾಗಿ ಕಿರುತೆರೆ ಪ್ರವೇಶಿಸಿ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ.

ಕ್ಯಾಮರ ಎದುರಿಸುವುದು ಅದಿತ್ಯನಿಗೆ ಹೊಸದೇನಲ್ಲ. ಈತ ಬಾಲನಟನಾಗಿ 'ರಂಗೀಲಾ', 'ಪರ್ದೆಸ್‌', 'ಜಬ್ ಪ್ಯಾರ್ ಕಿಸಿ ಸೆ ಹೋತ ಹೆ' ಮುಂತಾದ ಚಿತ್ರಗಳಲ್ಲಿ ನಟಿಸಿದ ಅನುಭವವಿದೆ.

"ಕಳೆದ ವರ್ಷ ನಾನು 'ಸ ರೆ ಗ ಮ ಪ ಚಾಲೇಂಜ್' ಮತ್ತು 'ಲಿಟ್ಲ್ ಚ್ಯಾಂಪ್'ನ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದೆ, ಅನಂತರ ತಂದೆಯೊಂದಿಗೆ ಪ್ರವಾಸಕ್ಕೆ ಹೋದೆ, ಇದೀಗ 'ಸ ರೆ ಗ ಮ ಪ ಚಾಲೇಂಜ್'ನ ಎರಡನೆ ಹಂತದ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದೆನೆ. ಇದರಲ್ಲಿ 40 ಸ್ಪರ್ಧಿಗಳಿದ್ದು ಇವರು ಹಿಮೇಶ್ ರೆಶಮಿಯಾ, ಪ್ರೀತಂ, ಆದೇಶ್ ಶ್ರೀವಾತ್ಸವ್ ಮತ್ತು ಶಂಕರ್ ಮಹದೇವನ್‌ರ ಶಿಷ್ಯರಾಗಿದ್ದಾರೆ" ಎಂದವರು ತಿಳಿಸಿದ್ದಾರೆ.

ಪ್ರತಿ 'ಘರಣ'ವು ನಾಲ್ಕು ಭಾರತೀಯ, ಒರ್ವ ಪಾಕಿಸ್ತಾನಿ, ಮತ್ತೊರ್ವ ಏಷ್ಯಾದ ಹೊರಗಿನ ಸ್ಪರ್ಧಿಯನ್ನು ಹೊಂದಿರುತ್ತದೆ ಮತ್ತು ಈ ಕಾರ್ಯಕ್ರಮ ಜುಲೈ 4 ರಿಂದ ಝಿ ಟಿವಿಯಲ್ಲಿ ಪ್ರಸಾರಗೊಳ್ಳಲಿದೆ ಎಂಬ ಮಾಹಿತಿಯನ್ನೂ ಅವರು ನೀಡಿದರು.
ಮತ್ತಷ್ಟು
ಕರಿನಾ ಬೇಬ್‌ಗಾಗಿ ಅಮ್‌ಸ್ಟರ್‌ಡಾಮ್‌ಗೆ ಹೊಂಟ ಸೈಫ್
ಸಿನಿಮಾ ಬಗ್ಗೆ ನಿರ್ಲಕ್ಷ್ಯವಿಲ್ಲ : ಪ್ರೀತಿ
ಸಾವರಿಯಾದ ಪೋರನಿಗೆ 7 ಕೋಟಿ !?
ಮರಾಠಿ ಚಿತ್ರ ನಿರ್ಮಾಣಕ್ಕಿಳಿದ ಬಿಗ್ ಬಿ
ಸಸ್ಯಾಹಾರಿ ಸೆಕ್ಸೀ ಅಮಿತಾಭ್!
ದಶಾವತಾರಂ: ಪ್ರೇಕ್ಷಕ ಥಮ್ಸ್ಅಫ್