ಮುಖ್ಯ ಪುಟ > ಮನರಂಜನೆ > ಬಾಲಿವುಡ್‌ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೆಂಪುಡುಪಿನಲ್ಲಿ ಲಕಲಕಿಸುವ ದಿಯಾ  Search similar articles
ಹಿಂದಿ ಚಿತ್ರರಂಗದಲ್ಲಿ ಪ್ರತಿ ಶುಕ್ರವಾರದಂದು ಅದೃಷ್ಟ ಮತ್ತು ಖ್ಯಾತಿಯ ಚೌಕಟ್ಟು ಬದಲಾಗುತ್ತಲೇ ಇರುತ್ತದೆ. ಕೆಲವರು ಮಾತ್ರ ತಮ್ಮ ಪ್ರಸಿದ್ಧಿಯ ಮಟ್ಟವನ್ನು ಕಾಯ್ದಿರಿಸಿಕೊಳ್ಳಬಲ್ಲರು. ದಿಯಾ ಮಿರ್ಜಾ ಅಂತಹ ಕೆಲವರಲ್ಲಿ ಒಬ್ಬರು! ಹಲವಾರು ಚಿತ್ರಗಳಲ್ಲಿ ತಮ್ಮ ಅಭಿನಯ ಪ್ರಾಬಲ್ಯತೆಯನ್ನು ಝಳಕಿಸಿದ್ದ ದಿಯಾ ಈಗ ಮತ್ತೊಮ್ಮೆ 'ಆಸಿಡ್ ಫ್ಯಾಕ್ಟರಿ'ಯೊಂದಿಗೆ ತೆರೆಯಲ್ಲಿ ಮಿನುಗಲು ಸಿದ್ಧಳಾಗಿದ್ದಾರೆ. ಈ ಚಿತ್ರದಲ್ಲಿ ದಿಯಾರ ಮಾದಕತೆ ಮತ್ತಷ್ಟು ಮತ್ತೇರುವಂತಿದೆಯಂತೆ.

IFM
ದಿಯಾಳ ಈ ಅವತಾರದ ಶ್ರೇಯವು ನಿಖಿಲ್ ಮೆಹೆರಾರಿಗೆ ಸಲ್ಲುತ್ತದೆ,ಏಕೆಂದರೆ ಚಿತ್ರದಲ್ಲಿ ನಿಖಿಲ್, ಸಂಜಯ್ ಗುಪ್ತರೊಡಗೂಡಿ ದಿಯಾಳಿಗೆ ಅತ್ಯಂತ ವ್ಯವಸ್ಥಿತ, ಮಾದಕ ಹಾಗು ಸೆಕ್ಸೀ ಲುಕ್ ಕೊಟ್ಟಿದ್ದಾರೆ. ಅವರುಗಳು ಹೇಳುವ ಪ್ರಕಾರ ಆಕೆ ಉಳಿದೆಲ್ಲ ಧಿರಿಸುಗಳಿಗಿಂತಲೂ ಆಕರ್ಷಕ ಕೆಂಪು ಉಡುಗೆಯಲ್ಲಿ ಒಂದೇ ನೋಟಕ್ಕೆ ನೋಡುಗರನ್ನು ಸೆಳೆಯಲಿದ್ದಾಳೆ.

ಈ ಮೇಲುಡುಗೆಗೆ ನ್ಯಾಯ ಸಲ್ಲಿಸಲು ದಿಯಾ ನಾಯಿಪಾಡು ಪಟ್ಟಿದ್ದಾಳೆ ಎನ್ನುವ ನಿಖಿಲ್ ಇಂದು ಪೂರ್ಣ ತೃಪ್ತರು. ಅವರೇ ಹೇಳುವ ಪ್ರಕಾರ 'ಆಸಿಡ್ ಫ್ಯಾಕ್ಟರಿ'ಯಲ್ಲಿ ದಿಯಾ ಹಿಂದೆಂದಿಗಿಂತಲೂ ಮಾದಕವಾಗಿ ಕಾಣಿಸಲಿದ್ದಾರೆ ಮತ್ತು ಕೆಂಪುಡುಗೆಯಲ್ಲಿ ಇನ್ನಷ್ಟು ಉತ್ತುಂಗದಲಿ.ಇದೊಂದು ಕಾಲುಗಳನ್ನು ಪ್ರದರ್ಶಿಸುವಂತಹ ಸ್ಲಿಟ್ ಇರುವ ಗೌನ್ ಮತ್ತು ಪಾತಕ ಲೋಕದ ಉಡುಗೆಗಳಿಂದ ಪ್ರಭಾವಿತ ಕಪ್ಪು ತೊಡೆಪಟ್ಟಿ ಹೊಂದಿದೆ. ಉತ್ತೇಜಕ ಕತ್ತುಗಳಿರುವ ಉಡುಗೆಗೆ ಹೊಂದುವ ಜಾಕೆಟ್‌ಗಳನ್ನು ಧರಿಸಿದ ಇನ್ನೊಂದು ಲುಕ್‌ನಲ್ಲಿಯು ದಿಯಾ ಕಾಣಿಸಲಿದ್ದಾರೆ.

ಈ ಮಾದಕ ನಟಿಯ ಹೊಸ ಅವತಾರದ ಬಗ್ಗೆ ನಾವನ್ನಬಹುದಾದುದಿಷ್ಟೆ, "ದಿಯಾಳ ಹೊಸ ಲುಕ್ ತರಲಿ ಅವರಿಗೆ ಒಳ್ಳೆ ಲಕ್ !"
ಏನಂತೀರಾ... ?
ಮತ್ತಷ್ಟು
ಆದಿತ್ಯನ ಚಿತ್ತವೂ ಬಾಲಿವುಡ್‌ನತ್ತ.......!
ಕರಿನಾ ಬೇಬ್‌ಗಾಗಿ ಅಮ್‌ಸ್ಟರ್‌ಡಾಮ್‌ಗೆ ಹೊಂಟ ಸೈಫ್
ಸಿನಿಮಾ ಬಗ್ಗೆ ನಿರ್ಲಕ್ಷ್ಯವಿಲ್ಲ : ಪ್ರೀತಿ
ಸಾವರಿಯಾದ ಪೋರನಿಗೆ 7 ಕೋಟಿ !?
ಮರಾಠಿ ಚಿತ್ರ ನಿರ್ಮಾಣಕ್ಕಿಳಿದ ಬಿಗ್ ಬಿ
ಸಸ್ಯಾಹಾರಿ ಸೆಕ್ಸೀ ಅಮಿತಾಭ್!