ಮುಖ್ಯ ಪುಟ > ಮನರಂಜನೆ > ಬಾಲಿವುಡ್‌ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಮ್ರಾನ್‍‌ ಖಾನ್ ನಿಜವಾಗ್ಲೂ ಖಾನ್ ಅಲ್ವಂತೆ!  Search similar articles
IFM
'ಜಾನೆ ತೂ ಯಾ ಜಾನೆ ನಾ' ಎಂಬ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪರಿಚಯವಾಗುತ್ತಿರುವ ಅಮೀರ್ ಖಾನ್‌ ಅವರ ಸೋದರಳಿಯ ಮುದ್ದುಮುದ್ದಾಗಿರುವ ಇಮ್ರಾನ್ ಬಗ್ಗೆ ಎಲ್ಲರ ಕುತೂಹಲ ಹರಿದಿದೆ. ಇಮ್ರಾನ್ ಬಗ್ಗೆ ಕೆಲವು ವಿಷಯಗಳು ಎಲ್ಲರಿಗೂ ಗೊತ್ತು.... ಇದು ಅವರ ಆರು ವರ್ಷಗಳ ಗರ್ಲ್‌ಪ್ರೆಂಡ್ ಅವಂತಿಕಾ ಮಲಿಕ್ ವಿಷಯವಲ್ಲ, ಬದಲಿಗೆ ಇಮ್ರಾನ್‌ನ ಸರ್‌ನೇಮ್ 'ಖಾನ್'ಗೆ ಸಂಬಂಧಿಸಿದ ವಿಚಾರ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.

ಸಂದರ್ಶನವೊಂದರಲ್ಲಿ ತನ್ನ ನಿಜವಾದ ಸ‌ರ್‌ನೇ‌ಮ್ ಖಾನ್ ಅಲ್ಲವೆಂದು ಬದಲಾಗಿ ಪಾಲ್ ಎಂದು ಇಮ್ರಾನ್‌ ಬಹಿರಂಗ ಪಡಿಸಿದ್ದಾರೆ. ಇಮ್ರಾನ್‌‌‍ನ ತಂದೆ ಬಂಗಾಲಿ. ಅವರ ಹೆಸರು ಅನಿಲ್ ಪಾಲ್. ಇವರು ವಿದೇಶದಲ್ಲಿ 'ಯಾಹು' ಸಂಸ್ಥೆಯಲ್ಲಿ ದುಡಿಯುತ್ತಿದ್ದಾರೆ. ಆದರೆ ಈ ಯುವ ನಟನಿಗೆ ಇಮ್ರಾನ್‌ ಖಾನ್ ಎಂದೇ ಕರೆಯಿಸಿಕೊಳ್ಳಲು ಇಷ್ಟವಂತೆ, ಏಕೆಂದರೆ ಅವರ ತಾಯಿಯ ಹೆಸರು 'ನೌಜತ್ ಖಾನ್' ಮತ್ತು ಇಮ್ರಾನ್‌ ಬಹು ಸಣ್ಣವರಾಗಿರುವಾಗಲೇ ತಂದೆ ದೂರಾಗಿದ್ದರು.

ಇಮ್ರಾನ್‌‌ಗೆ ತಾಯಿಯೆ ಹೆಚ್ಚು ನಿಕಟವಾಗಿರುವುದರಿಂದ, ಖಾನ್ ಎಂದು ಕರೆಯಿಸಿಕೊಳ್ಳುವುದರ ಮೂಲಕ ಅವರಿಗೆ ಅಭಿವಂದನೆ ಸಲ್ಲಿಸಲಿಚ್ಚಿಸುತ್ತಿದ್ದಾನೆ. ನೌಜತ್ ಖಾನ್ ಇಮ್ರಾನ್‌ಗೆ ಒಂಟಿ ಪೋಷಕರಾಗಿರುವುದು ಇದಕ್ಕೆ ಕಾರಣವಿರಬಹುದು. ಆದರೆ, ನೌಜತ್ ಈಗ ಅವರು ಕಾಶ್ಮೀರಿ ನಟ 'ರಾಜ್ ಜುತ್ಸಿ' ಅವರನ್ನು ವಿವಾಹವಾಗಿದ್ದಾರೆ. ಹಾಗಾಗಿ ಇಮ್ರಾನ್‌ ಖಾನ್ ಅರ್ಧ ಮುಸ್ಲಿಮ್, ಅರ್ಧ ಬಂಗಾಲಿ, ಮತ್ತು ಒಂದಿಷ್ಟು ಕಾಶ್ಮೀರಿಯೂ ಹೌದು...

ಮತ್ತಷ್ಟು
ರಜನಿ V/s ಶಾರೂಖ್ ಚಿತ್ರ ಸಮರ
ಕೆಂಪುಡುಪಿನಲ್ಲಿ ಲಕಲಕಿಸುವ ದಿಯಾ
ಆದಿತ್ಯನ ಚಿತ್ತವೂ ಬಾಲಿವುಡ್‌ನತ್ತ.......!
ಕರಿನಾ ಬೇಬ್‌ಗಾಗಿ ಅಮ್‌ಸ್ಟರ್‌ಡಾಮ್‌ಗೆ ಹೊಂಟ ಸೈಫ್
ಸಿನಿಮಾ ಬಗ್ಗೆ ನಿರ್ಲಕ್ಷ್ಯವಿಲ್ಲ : ಪ್ರೀತಿ
ಸಾವರಿಯಾದ ಪೋರನಿಗೆ 7 ಕೋಟಿ !?