ಮುಖ್ಯ ಪುಟ > ಮನರಂಜನೆ > ಬಾಲಿವುಡ್‌ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಲ್‌ಸ್ಮಿತ್‌ರ ಮೊದಲ ಆಯ್ಕೆ ಐಶ್ ಬೇಬ್  Search similar articles
IFM
ಆಸ್ಕರ್ ಪ್ರಶಸ್ತಿ ವಿಜೇತ ಚಾರ್ಲೈಜ್ ತೆರೊನ್ ಚಿತ್ರದ 'ಹಾನ್ಕೋಕ್' ಪಾತ್ರಕ್ಕೆ ವಿಲ್‌ಸ್ಮಿತ್ ಅವರ ಮೊದಲ ಆಯ್ಕೆ ಭಾರತೀಯ ನಟಿ ಐಶ್ವರ್ಯ ರೈ. ಆದರೆ ರೈ ಈ ಪ್ರಸ್ತಾಪವನ್ನು ನಿರಾಕರಿಸಿರುವುದು ಸ್ಮಿತ್‌ಗೆ ನಿರಾಸೆಯಾಗಿದೆ.

ತಾನು ಐಶ್ವರ್ಯಳ ಬಹು ದೊಡ್ಡ ಅಭಿಮಾನಿ ಎಂದಿರುವ ಸ್ಮಿತ್‌ಗೆ ಭವಿಷ್ಯದಲ್ಲಾದರೂ, ತೆರೆ ಮೇಲೆ ಐಶ್ ಸಂಗ ಸಿಕ್ಕೇ ಸಿಗುತ್ತದೆಂಬ ನಂಬಿಕೆ.

"ನನಗೆ ಐಶ್ವರ್ಯರೊಂದಿಗೆ ನಟಿಸಲು ಬಹಳ ಇಷ್ಟ. ಅತ್ಯಂಡ ಬೆಡಿಗಿನ ಈ ನಟಿಗೆ ತನ್ನೊಂದಿಗೆ ಪಾತ್ರ ಮಾಡುವ ಪ್ರಸ್ತಾಪವನ್ನು ಕೂಡ ಮಂಡಿಸಿದ್ದೆ. 'ಹಾನ್ಕೋಕ್'ನಲ್ಲಿ ಐಶ್‌ಗೆ ತನ್ನ ಮೊದಲ ಆದ್ಯತೆ" ಎಂದು ಅವರು ವರದಿಗಾರರಿಗೆ ತಿಳಿಸಿದರು.

"ನಾನು ಎಲ್ಲ ಸಂದರ್ಭದಲ್ಲೂ ನಿರಾಕರಿಸಲ್ಪಟ್ಟೆ. ಬಹುಶಃ ಅವರಿಗೆ ಸಮರ್ಥನೀಯ ಸಮಸ್ಯೆಗಳು ಇದ್ದಿರಬಹುದು. ಆದರೆ ಖಂಡಿತವಾಗಿ, ಐಶ್ವರ್ಯರೊಂದಿಗೆ ನಟಿಸಲೋಸಗ ನಾನು ಏನು ಮಾಡಲೂ ಸೈ" ಎನ್ನುತ್ತಾರೆ ಆಶಾವಾದಿ ಸ್ಮಿತ್.

ಭಾರತೀಯ ಚಿತ್ರರಂಗದ ಅಭಿಮಾನಿಯಾಗಿರುವ ಸ್ಮಿತ್‌ಗೆ ಇಲ್ಲಿನ ಚಿತ್ರಗಳಲ್ಲಿ ನಟಿಸುವ ಇಚ್ಚೆಯೂ ಇದೆಯಂತೆ."ನಾನು ಭಾರತೀಯ ಚಿತ್ರದಲ್ಲಿ ನಟಿಸಲು ಇಷ್ಟಪಡುತ್ತೇನೆ. ನಾನು ಒಂದೆರಡು ಹಿಂದಿ ಸಿನಿಮಾಗಳನ್ನು ವೀಕ್ಷಿಸಿದ್ದೇನೆ, ಅವು ನನ್ನ ಮೇಲೆ ಬಹಳಷ್ಟು ಪ್ರಭಾವ ಬೀರಿದೆ. ನಾನು ಕರಣ್ ಜೊಹರ್ ಅವರೊಂದಿಗೂ ಮಾತನಾಡಿದ್ದೇನೆ. ಏನಾಗುತ್ತದೆ ಎಂದು ನೋಡೋಣ" ಎಂದಿದ್ದಾರೆ ಈ ನಟ ಮಹಾಶಯ.

"ನಾನು ಭಾರತೀಯ ಸಿನಿಮಾ ಮತ್ತು ನಟರನ್ನು ಇಷ್ಟಪಡುತ್ತೇನೆ. ಅವರ ಚೈತನ್ಯ ಮಟ್ಟವು ಸ್ಪರ್ಧಾರಹಿತವಾದುದು. ಹಿಂದಿ ಚಿತ್ರಗಳಲ್ಲಿನ ಹಾಡು ಹಾಗು ನೃತ್ಯಗಳು ಅದ್ಭುತವಾಗಿರುತ್ತವೆ" ಎಂಬ ಒಗ್ಗರಣೆಯನ್ನೂ ಅವರು ಸೇರಿಸಿದರು.
ಮತ್ತಷ್ಟು
ನಟನೆ ನಿಜಕ್ಕೂ ಆನಂದದಾಯಕ: ಫರಾನ್ ಅಖ್ತರ್
ತಾನ್ಯಾರಿಗೂ ಕೆಟ್ಟದು ಬಯಸೆ: ಅಮೀರ್
ಇಮ್ರಾನ್‍‌ ಖಾನ್ ನಿಜವಾಗ್ಲೂ ಖಾನ್ ಅಲ್ವಂತೆ!
ರಜನಿ V/s ಶಾರೂಖ್ ಚಿತ್ರ ಸಮರ
ಕೆಂಪುಡುಪಿನಲ್ಲಿ ಲಕಲಕಿಸುವ ದಿಯಾ
ಆದಿತ್ಯನ ಚಿತ್ತವೂ ಬಾಲಿವುಡ್‌ನತ್ತ.......!